Thursday, August 18, 2022

Latest Posts

ಮುಂದಿನ ವರ್ಷದ ಹೊತ್ತಿಗೆ 5 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕವಾಗಿ ಎದುರಿಸುತ್ತಿರುವ ಕೋವಿಡ್ ಬಿಕ್ಕಟ್ಟು ನಿವಾರಣೆಗೆ “ಒಂದು ಭೂಮಿ..ಒಂದು ಆರೋಗ್ಯ” ಎಂಬುದು ಪ್ರತಿ ರಾಷ್ಟ್ರದ ಧ್ಯೇಯವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ರೋಮ್​ನಲ್ಲಿ ಜಿ20 ರಾಷ್ಟ್ರಗಳ 16ನೇ ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಅವರು,  ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಸಹಾಯ ಮಾಡಲು ಭಾರತವು ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಸಿದ್ಧವಾಗಿದೆ ಎಂದು ಹೇಳಿದರು.

ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತದ ಕೊಡುಗೆ, ನಿರ್ವಹಿಸುತ್ತಿರುವ ಪ್ರಮುಖ ಪಾತ್ರ ಗಮನಾರ್ಹ. ಭಾರತದ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್​ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಒಪ್ಪಿಗೆ ನೀಡಿಲ್ಲ. ಇದಕ್ಕೆ ಒಪ್ಪಿಗೆ ಸಿಕ್ಕರೆ ಭಾರತ ಇತರೆ ದೇಶಗಳಿಗೂ ನೆರವಾಗವುದಕ್ಕೆ ಸಾಧ್ಯವಿದೆ ಎಂದು ಹೇಳಿದರು.

ಜಾಗತಿಕ ಹಣಕಾಸು ವಿನ್ಯಾಸ ಇನ್ನಷ್ಟು ಸುಗಮಗೊಳಿಸಲು ಶೇಕಡಾ 15ರಷ್ಟು ಕನಿಷ್ಠ ಕಾರ್ಪೊರೇಟ್ ತೆರಿಗೆಯನ್ನು ತರಲು ಜಿ20ಯಲ್ಲಿ ತೀರ್ಮಾನಿಸಿರುವುದು ಪ್ರಧಾನಿಯವರಿಗೆ ಸಂತಸ ತಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ ಶೃಂಗ್ಲ ತಿಳಿಸಿದ್ದಾರೆ.

ಜಿ20 ಶೃಂಗದ ವಿರಾಮದ ವೇಳೆ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್, ಫ್ರಾನ್ಸ್​ ಅಧ್ಯಕ್ಷ ಇಮ್ಯಾನುವೆಲ್​ ಮಾಕ್ರನ್​, ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​, ಕೆನಡಾ ಪ್ರಧಾನಿ ಜಸ್ಟಿನ್​ ಟ್ರೂಡ್​ ಮತ್ತಿತರ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಿಂಗಾಪುರ ಪ್ರಧಾನಿ ಲೀ ಹ್ಸಿನ್​ ಲೂಂಗ್ ಟ್ವೀಟ್ ಮೂಲಕ​  ಪ್ರಧಾನಿ ಮೋದಿ ತಮ್ಮೊಂದಿಗೂ  ಫಲಪ್ರದವಾದ  ಮಾತುಕತೆ ನಡೆಸಿರುವುದಾಗಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!