ನಿಷೇಧಿತ ಸಂಘಟನೆಯಿಂದ ಬೆದರಿಕೆ: ಕೇರಳದ ಐವರು ಆರ್‌ಎಸ್‌ಎಸ್ ನಾಯಕರಿಗೆ ʼವೈʼ ಶ್ರೇಣಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಿಎಫ್‌ಐ ಸಂಘಟನೆಯಿಂದ ಸಂಭಾವ್ಯ ಬೆದರಿಕೆಗಳ ಹಿನ್ನೆಲೆಯಲ್ಲಿ ಕೇರಳದ ಐವರು ಆರ್‌ಎಸ್‌ಎಸ್ ನಾಯಕರಿಗೆ ಕೇಂದ್ರವು ʼವೈʼ ಕೆಟಗರಿ ಭದ್ರತೆಯನ್ನು ನೀಡಿದೆ.
ಕೇಂದ್ರೀಯ ತನಿಖಾ ಸಂಸ್ಥೆಗಳು ಇತ್ತೀಚೆಗೆ ಇಸ್ಲಾಮಿಕ್ ಸಂಘಟನೆ ಪಿಎಫ್‌ ಐ ಮೇಲೆ ನಡೆಸಿದ ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ದಾಖಲೆಗಳಲ್ಲಿ ಈ ಐವರು ರಾಷ್ಟ್ರೀಯ ಸ್ವಯಂಸೇವಕ ಸಂಘ ನಾಯಕರ ಹೆಸರುಗಳು ಪಿಎಫ್‌ಐ ದಾಳಿಯ ರಾಡಾರ್‌ನಲ್ಲಿ ಕಂಡುಬಂದಿದೆ ಎಂದು ತಿಳಿದುಬಂದಿದೆ. ಪಿಎಫ್‌ಐ ಸಂಘಟನೆಯನ್ನು ಈ ವಾರದ ಆರಂಭದಲ್ಲಿ ನಿಷೇಧಿಸಲಾಗಿದೆ.
ಕೇಂದ್ರೀಯ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಒದಗಿಸಿದ ದಾಖಲೆಗಳು ಹಾಗೂ ಶಿಫಾರಸುಗಳ ಆಧಾರದ ಮೇಲೆ ಐದು ಆರ್‌ಎಸ್‌ಎಸ್ ನಾಯಕರಿಗೆ ಕೇಂದ್ರ ಭದ್ರತಾ ಶ್ರೇಣಿಯ -ವೈ ಕೆಟಗರಿ ಭದ್ರತೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಿಐಪಿ ಭದ್ರತಾ ವಿಭಾಗವನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಮೂಲ ಹೇಳಿವೆ.
ಪ್ರತಿ ನಾಯಕರಿಗೆ ಸುಮಾರು ಎರಡರಿಂದ ಮೂರು ಸಶಸ್ತ್ರ ಕಮಾಂಡೋಗಳನ್ನು ಒದಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಬಿಹಾರದ ಬಿಜೆಪಿ ಮುಖ್ಯಸ್ಥ ಮತ್ತು ಪಶ್ಚಿಮ ಚಂಪಾರಣ್‌ನ ಸಂಸದ ಸಂಜಯ್ ಜೈಸ್ವಾಲ್‌ ಅವರಿಗೂ ಇದೇ ರೀತಿಯ ರಕ್ಷಣೆ ನೀಡಲಾಗಿದೆ.
ಈ ಆರು ನಾಯಕರ ಸೇರ್ಪಡೆಯೊಂದಿಗೆ, ಸಿಆರ್‌ಪಿಎಫ್ ತನ್ನ ವಿಐಪಿ ಭದ್ರತಾ ನೀತಿಯ ಅಡಿಯಲ್ಲಿ ಕನಿಷ್ಠ 125 ಜನರಿಗೆ ಭದ್ರತೆ ನೀಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!