Wednesday, February 8, 2023

Latest Posts

ಓಲಾ, ಉಬರ್‌ ಕಂಪನಿಗಳ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಓಲಾ, ಉಬರ್‌ ಕಂಪನಿಗಳ ಆಟೋ ಸೇವೆಗೆ ಶೇ.5ರಷ್ಟು ಸೇವಾಶುಲ್ಕ ನಿಗದಿಪಡಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಮೋಟರ್‌ ವಾಹನ ಅಗ್ರಿಗೇಟರ್ಸ್‌ -2020 ಪ್ರಕಾರ ದರವನ್ನು ಶೇ.50ರಿಂದ ಶೇ.150ರಷ್ಟು ಏರಿಕೆ ಮಾಡಬಹುದು ಎಂಬ ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಆಧಾರ ಓಲಾ, ಉಬರ್‌ ಕಂಪನಿಗಳು ದರ ಹೆಚ್ಚಿಸಲು ಮುಂದಾಗಿತ್ತು. ಆದ್ರೆ ರಾಜ್ಯ ಸರ್ಕಾರ ಬ್ರೇಕ್​ ಹಾಕಿ ಶೇ.5ರಷ್ಟು ಮಾತ್ರ ಸೇವಾಶುಲ್ಕ ನಿಗದಿಪಡಿಸಿತ್ತು. ಇದರ ವಿರುದ್ಧ ಓಲಾ, ಉಬರ್‌ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡುತ್ತೇವೆ. ಇದರಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸುತ್ತಿದೆ, ಹಾಗೇ ಕೇಂದ್ರದ ಸಾರಿಗೆ ಇಲಾಖೆಯ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎನ್ನುವುದು ಓಲಾ, ಊಬರ್​ನ ವಾದಗಿದೆ. ಇದೀಗ ಇದಕ್ಕೆ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರದ ಶೇ. 5ರಷ್ಟು ಸೇವಾಶುಲ್ಕ ನಿಗದಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!