ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

40ರ ಆಸುಪಾಸಿನ ಮಹಿಳೆಯರಿಗೆ ಪುರುಷರು ಈ ರೀತಿಯಾಗಿದ್ದರೆ ಬಹಳ ಇಷ್ಟವಾಗುತ್ತಂತೆ!

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿ ಯಾವಾಗ ಬೇಕಾದರೂ ಹುಟ್ಟುತ್ತದೆ. 10 ವರ್ಷದವನಿಗೂ ಪ್ರೀತಿಯಾಗುತ್ತದೆ. 70 ವರ್ಷದ ವೃದ್ಧನಿಗೂ ಪ್ರೀತಿಯಾಗುತ್ತದೆ. ಆದರೆ ವಯಸ್ಸಿಗೆ ತಕ್ಕಂತೆ ಸಂಗಾತಿಯಿಂದ ಬಯಸುವುದು ಮಾತ್ರ ಬೇರೆ ಬೇರೆ. ನೀವು 40 ವರ್ಷದ ಆಸುಪಾಸಿನ ಪುರುಷರಾಗಿದ್ದು, ಸಂಗಾತಿಯನ್ನು ಹುಡುಕುತ್ತಿದ್ದರೆ ಸಂಗಾತಿ ನಿಮ್ಮಿಂದ ಏನನ್ನು ಬಯಸುತ್ತಾಳೆ ಎಂಬುದನ್ನು ತಿಳಿದುಕೊಳ್ಳಿ.

  • ಮಹಿಳೆಯರು ಪ್ರತಿ ಪುರುಷನಲ್ಲಿಯೂ ಪ್ರಾಮಾಣಿಕತೆ ಬಯಸುತ್ತಾರೆ. ದೈಹಿಕವಾಗಿ, ಭಾವನಾತ್ಮಕವಾಗಿ ಎಲ್ಲ ರೀತಿಯಲ್ಲಿಯೂ ತನ್ನ ಸಂಗಾತಿ ಪ್ರಾಮಾಣಿಕವಾಗಿರಲಿ ಎನ್ನುತ್ತಾರೆ. ಪ್ರಾಮಾಣಿಕ ಸಂಗಾತಿಯನ್ನು ಮಹಿಳೆಯರು ಹೆಚ್ಚು ಗೌರವಿಸುತ್ತಾರೆ.
  • ಮಹಿಳೆಯರು ಎಂದಿಗೂ ತಾನು ಹೇಗಿದ್ದೇನೋ ಹಾಗೇ ಇರಲು ಬಿಡುವ ಪುರುಷನನ್ನು ಬಹಳ ಇಷ್ಟಪಡುತ್ತಾರೆ. ತಮಗಿಂತ ಚಿಕ್ಕ ವಯಸ್ಸಿನ ಮಹಿಳೆಯರೊಂದಿಗೆ ಹೋಲಿಕೆ ಮಾಡುವುದನ್ನು ಮಹಿಳೆಯರು ಇಷ್ಟಪಡುವುದಿಲ್ಲ. ಎಂದಿಗೂ ನಿಮ್ಮ ಸಂಗಾತಿಯನ್ನು ಹೋಲಿಕೆ ಮಾಡಬೇಡಿ.
  • 18ರ ಹರೆಯದಲ್ಲಿ ಹುಟ್ಟುವ ಪ್ರೀತಿಗೂ 40ರ ಮಾಗುತ್ತಿರುವ ವಯಸ್ಸಿನಲ್ಲಿ ಹುಟ್ಟುವ ಪ್ರೀತಿಗೂ ಬಹಳ ವ್ಯತ್ಯಾಸವಿರುತ್ತದೆ. ಈ ವಯಸ್ಸಿನಲ್ಲಿ ಮಹಿಳೆ ನಿಮ್ಮನ್ನು ಪ್ರೀತಿಸುತ್ತಿರುವುದಾಗಿ ಹೇಳಿದರೆ ಅದಕ್ಕೆ ಬಹಳ ತೂಕವಿರುತ್ತದೆ ಮತ್ತು ಪ್ರಬುದ್ಧತೆ ಇರುತ್ತದೆ. ಅಂತಹ ಪ್ರೀತಿಯನ್ನು ನಿರ್ಲಕ್ಷ್ಯ ಮಾಡಬೇಡಿ.
  • 40ರ ವಯಸ್ಸಿನಲ್ಲಿ ಜೀವನ ಎಂದರೇ ಕೇವಲ ಪ್ರೀತಿ ಅಲ್ಲ. ಅದರ ಆಚೆಗೂ ಒಂದು ಬದುಕಿದೆ ಎಂಬುದು ಅರ್ಥವಾಗಿರುತ್ತದೆ. ಈ ಸಮಯದಲ್ಲಿ ಸಂಗಾತಿ ನಿಮ್ಮಿಂದ ಕೇವಲ ಪ್ರೀತಿ ಮಾತ್ರವಲ್ಲ, ಆರ್ಥಿಕ ಭದ್ರತೆಯನ್ನೂ ಬಯಸುತ್ತಾಳೆ.
  • 40ರ ಆಸುಪಾಸಿನ ಮಹಿಳೆಯರು ತನ್ನನ್ನು ಮದುವೆಯಾಗುವ ಸಂಗಾತಿ ತನ್ನೆಲ್ಲ ಹಳೆ ಸಂಬಂಧಗಳನ್ನೂ ಹೇಳಿಕೊಂಡಿರಬೇಕು. ಯಾವುದೇ ಕಾರಣಕ್ಕೂ ತನ್ನಿಂದ ಯಾವ ವಿಷಯವನ್ನೂ ಮುಚ್ಚಿಡಬಾರದು ಎಂದು ಬಯಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss