ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ತಾರೆ. ಕನ್ನಡ,ತೆಲುಗು,ಮಲಯಾಳಂ, ತಮಿಳ್ ಹಾಗೂ ಹಿಂದಿಯಲ್ಲೂ ರಶ್ಮಿಕಾ ಮಿಂಚುತ್ತಿದ್ದಾರೆ. ತನ್ನ ಕರಿಯರ್ನ ಉತ್ತುಂಗದಲ್ಲಿರೋ ರಶ್ಮಿಕಾ ಬಗ್ಗೆ ನಮಗೆಲ್ಲಾ ಗೊತ್ತೇ ಇರದ ಸಾಕಷ್ಟು ವಿಷಯಗಳಿಗೆ. ಯಾವ ವಿಷಯ ನೋಡಿ..
ರಶ್ಮಿಕಾ ಮಂದಣ್ಣಗೆ ಈಗ 25 ವರ್ಷ. 19 ವರ್ಷಕ್ಕೇ ರಶ್ಮಿಕಾ ಸಿನಿ ಜರ್ನಿ ಶುರು ಮಾಡಿದ್ರು.
ರಶ್ಮಿಕಾ ಸೈಕಾಲಜಿ ಓದಿದ್ದಾರೆ, ಸೈಕಾಲಜಿ ಜೊತೆಗೆ ಪತ್ರಿಕೋದ್ಯಮ ಡಿಗ್ರಿ ಕೂಡ ಮಾಡಿದ್ದಾರೆ.
ರಶ್ಮಿಕಾಗೆ 10 ವರ್ಷದ ಪುಟ್ಟ ತಂಗಿ ಇದ್ದಾಳೆ. ಇವಳ ಹೆಸರು ಶಿಮನ್ ಮಂದಣ್ಣ
ರಶ್ಮಿಕಾ ತುಂಬಾ ಖಾಸಗಿ ವ್ಯಕ್ತಿ. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿನಾರ್ಥ ಮುರಿದು ಬಿದ್ದ ನಂತರದಿಂದ ರಶ್ಮಿಕಾ ತನ್ನ ಯಾವುದೇ ಖಾಸಗಿ ವಿಷಯವನ್ನು ಹೊರಗೆ ಹಂಚಿಕೊಂಡಿಲ್ಲ.
ರಶ್ಮಿಕಾಗೆ ಬೀಚ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಯಾವಾಗ ಬಿಡುವಾದ್ರೂ ರಶ್ಮಿಕಾ ಬೀಚ್ಗೆ ಹೋಗಿ ಬರ್ತಾರೆ.