ಪ್ರೀತಿಯ ಅಳಿಯ ರಾಹುಲ್ ಗೆ 50 ಕೋಟಿಯ ಬಂಗಲೆ ಗಿಫ್ಟ್ ಕೊಟ್ರಾ ಸುನೀಲ್ ಶೆಟ್ಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ದಿನಗಳ ಹಿಂದೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್​. ರಾಹುಲ್(KL Rahul Athiya Shetty)​ ಮತ್ತು ಬಾಲಿವುಡ್‌ ನಟಿ ಅಥಿಯಾ ಶೆಟ್ಟಿ(Athiya)ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿಗೆ ಸಿನಿಮಾ , ಕ್ರೀಡಾ ರಂಗದ ಅನೇಕ ದಿಗ್ಗಜರು ಶುಭಾಶಯ ಕೋರಿದ್ದು, ಜೊತೆಗೆ ಉಡುಗರೆಯನ್ನು ನೀಡಿದ್ದಾರೆ.

ಖಾಸಗಿ ಸಮಾರಂಭದಲ್ಲಿ ನಡೆದ ಈ ಜೋಡಿಯ ವಿವಾಹ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಯಾವುದೇ ಟೀಮ್​ ಇಂಡಿಯಾ ಆಟಗಾರರು ಭಾಗಿಯಾರಲಿಲ್ಲ. ಆದ್ರೆ ವರದಿಗಳ ಪ್ರಕಾರ ಕೊಹ್ಲಿ ಅವರು ರಾಹುಲ್ ಮತ್ತು ಅಥಿಯಾ ಜೋಡಿಗೆ 2.17 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಹೇಂದ್ರ ಸಿಂಗ್ ಧೋನಿ ಕೂಡ ರಾಹುಲ್‌ಗೆ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ . ಈ ಬೈಕ್‌ನ ಮಾರುಕಟ್ಟೆ ಬೆಲೆ ಸುಮಾರು 80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರು ರಾಹುಲ್​ ಮತ್ತು ಅಥಿಯಾ ಜೋಡಿಗೆ 1.5 ಕೋಟಿ. ರೂ. ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಮಾತ್ರವಲ್ಲದೆ ಮಗಳು ಅಥಿಯಾ ಮತ್ತು ಅಳಿಯ ರಾಹುಲ್​ಗೆ ಸುನೀಲ್​ ಶೆಟ್ಟಿ ಮುಂಬೈಯಲ್ಲಿ 50 ಕೋಟಿ ರೂ. ಮೌಲ್ಯದ ಐಶಾರಾಮಿ ಅಪಾರ್ಟ್‌ಮೆಂಟ್‌ ಗಿಫ್ಟ್​ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!