ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಮಳೆ ಇಲ್ಲದೆ, ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇದೀಗ ತಾಪಮಾನ ಹೆಚ್ಚಳದಿಂದಾಗಿ ಕೆಂಗಟ್ಟಿರುವ ಜನರು ಮೋಡ ಬಿತ್ತನೆ ಮಾಡಿಕೊಂಡು ಮಳೆ ಆಗುವಂತೆ ಮಾಡಿಕೊಳ್ಳಲಾರಂಭಿಸಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಈ ತಿಂಗಳ ಆರಂಭದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯೆಸ್ ದಾಟಿತ್ತು. ಆ ಹಿನ್ನೆಲೆಯಲ್ಲಿ ಡ್ರೋನ್ಗಳ ಮೂಲಕ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಮಾಡಲಾಗಿದೆ. ಕ್ಲೌಡ್ ಸೀಡಿಂಗ್ನಿಂದಾಗಿ ದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದಾಗಿ ಹೇಳಲಾಗಿದೆ. ಮಳೆಯ ವಿಡಿಯೋಗಳನ್ನೂ ಅಲ್ಲಿನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಗಳು ಸೇರಿ ಅನೇಕರು ಹಂಚಿಕೊಳ್ಳಲಾರಂಭಿಸಿದ್ದಾರೆ.
ಈ ರೀತಿ ಕ್ಲೌಡ್ ಸೀಡಿಂಗ್ ಮೂಲಕ ಕೃತಕ ಮಳೆ ತರಿಸುವುದು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಳೆ ಹೆಚ್ಚಿಸುವ ಯೋಜನೆಯ ಒಂದು ಭಾಗವಾಗಿದೆ. ಇದರಿಂದಾಗಿ ವಾರ್ಷಿಕ ಮಳೆಯಲ್ಲಿ ಸುಮಾರು ನಾಲ್ಕು ಇಂಚು ಮಳೆ ಹೆಚ್ಚಾಗುವುದಾಗಿ ತಿಳಿಸಲಾಗಿದೆ. ಈ ಕೃತಕ ಮಳೆಗಾಗಿ 2017ರಲ್ಲಿ ದೇಶವು ಒಂಬತ್ತು ಯೋಜನೆಗಳನ್ನು ಆರಂಭಿಸಿದ್ದು, ಅದಕ್ಕಾಗಿ 15 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
Planning works! #Dubai started to invest $15 million in 2017 in 9 rain making projects. So this is the result of heavy fake rain now in July to beat the heat and replenishing water sources.#climate #water #rain #tech #UAE #MiddleEast #technology pic.twitter.com/pI8geKwedH
— Shahriar Sabet (@shahriarsabet) July 21, 2021