ಸಂಘರ್ಷ ಪೀಡಿತ ಉಕ್ರೇನ್‌ ನಲ್ಲಿ ಸಿಲುಕಿದ್ದಾರೆ 50 ಭಾರತೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಇನ್ನೂ 50 ಮಂದಿ ಭಾರತೀಯರಿದ್ದಾರೆ. ಅವರಲ್ಲಿ 15-20 ಜನರು ತಾಯ್ನಾಡಿಗೆ ಮರಳಲು ಬಯಸಿದ್ದಾರೆ. ಅವರ ವಾಪಾಸಾತಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ. ಆಪರೇಷನ್ ಗಂಗಾ” ಇನ್ನೂ ಮುಂದುವರೆದಿದೆ ಎಂದು ಪ್ರತಿಪಾದಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ, ಯುದ್ಧದ ಪರಿಸ್ಥಿತಿಯಲ್ಲಿ ಸಿಲುಕಿರುವರನ್ನು ಕರೆತರಲು ನಮ್ಮಿಂದ ಸಾಧ್ಯವಾಗುವ ಪ್ರಯುತ್ನಗಳೆಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದರು.
ಮೂರು ದಿನಗಳ ಹಿಂದಿನ ಲೆಕ್ಕಾಚಾರಗಳ ಪ್ರಕಾರ ಅಲ್ಲಿ ಸುಮಾರು 50 ಭಾರತೀಯರು ಇದ್ದಾರೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆ ದೇಶವನ್ನು ತೊರೆಯಲು ಬಯಸುವ 15-20 ಜನರಿದ್ದಾರೆ, ಉಳಿದವರು ಈಗಲೇ ಹೊರಡಲು ಬಯಸುತ್ತಿಲ್ಲ. ಎಲ್ಲರೊಂದಿಗೂ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಬಾಗ್ಚಿ ಹೇಳಿದರು.
ಈ ಗಾಗಲೇ ಆಪರೇಷನ್‌ ಗಂಗಾ ಕಾರ್ಯಾಚರಣೆ ಮೂಲಕ 22,500 ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆತರಲಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!