Thursday, August 18, 2022

Latest Posts

ತಾಳಗುಪ್ಪ-ಸಿದ್ದಾಪುರ-ಸಿರಸಿ-ಹುಬ್ಬಳ್ಳಿ ರೈಲ್ವೆ ಮಾರ್ಗ ಸಮೀಕ್ಷೆಗೆ 50 ಲ. ರೂ. ಹಣ ಮಂಜೂರು: ಸಂಸದ ಬಿ.ವೈ.ರಾಘವೇಂದ್ರ

ಹೊಸ ದಿಗಂತ ವರದಿ, ಶಿವಮೊಗ್ಗ :

ತಾಳಗುಪ್ಪ-ಸಿದ್ದಾಪುರ-ಸಿರಸಿ-ಹುಬ್ಬಳ್ಳಿ ರೈಲ್ವೆ ಮಾರ್ಗ ಸಮೀಕ್ಷೆಗೆ 50 ಲಕ್ಷ ರೂ. ಹಣ ಮಂಜೂರಾಗಿದೆ. ಶೀಘ್ರ ಸರ್ವೇಕಾರ್ಯ ಪ್ರಾರಂಭಗೊಳ್ಳಲಿದೆ. ಸಾಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣವನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಂಗಳವಾರ ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಂತರ ಮಲೆನಾಡಿನ ಹೆಬ್ಬಾಗಿಲು ಎನಿಸಿಕೊಂಡಿರುವ ಸಾಗರ ಪ್ರವಾಸೋದ್ಯಮ ದೃಷ್ಟಿಯಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದುತ್ತಿದೆ. ಜೋಗ ಜಲಪಾತ ಪ್ರದೇಶಾಭಿವೃದ್ಧಿಗೆ 165 ಕೋಟಿ ರೂ. ಮಂಜೂರಾಗಿದ್ದು, ಶೀಘ್ರದಲ್ಲಿಯೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರಗಳಂತೆ ಜೋಗ ಅಭಿವೃದ್ಧಿ ಕೇವಲ ಆಶ್ವಾಸನೆಯಾಗಿ ಉಳಿಯುವುದಿಲ್ಲ. ಬದಲಾಗಿ ವಾರದಲ್ಲಿ ಎಲ್ಲ ದಿನವೂ ಜಲಪಾತದಲ್ಲಿ ನೀರು ಹರಿಸುವುದು, ಸ್ಟಾರ್ ಹೋಟೆಲ್ ನಿರ್ಮಾಣ, ಈಜುಕೊಳ ಅಭಿವೃದ್ಧಿ, ತಲಕಳಲೆ ಹಿನ್ನೀರಿನಲ್ಲಿ ವಾಟರ್ ಸ್ಪೋರ್ಟ್ಸ್, ಹಿನ್ನೀರಿನ ಪ್ರದೇಶದಲ್ಲಿ ಕ್ರೂಸರ್ ಸಂಚರಿಸುವಂತೆ ಮಾಡುವುದು, ಕೇಬಲ್ ಕಾರ್ ಹೀಗೆ ಪ್ರವಾಸಿಗರನ್ನು ಸೆಳೆಯಲು ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಅದೆಲ್ಲ ಹಂತಹಂತವಾಗಿ ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!