ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕ್ಷೇತ್ರದ ಮೂಗ್ತಿಹಳ್ಳಿ ಗ್ರಾ.ಪಂ. ಮತ್ತಾವರ ಗ್ರಾಮದಲ್ಲಿ ಶ್ರೀ ಪಾಶ್ರ್ವನಾಥ ಜೈನ ಸಂಘದ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ
ಜೈನ ಸಮುದಾಯ ಭವನಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದೆ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಆರ್ಥಿಕ ಕೊರತೆಯಿಂದ ಸಮುದಾಯ ಭವನದ ಕಾಮಗಾರಿ ಸ್ಥಗಿತಗೊಂಡಿದ್ದು, ಸಮುದಾಯ ಭವನ ಪೂರ್ಣಗೊಳಿಸಲು 50 ಲಕ್ಷ ರೂ. ಮಂಜೂರು ಮಾಡಿಸಿಕೊಡಬೇಕೆಂದು ಜೈನ ಸಂಘದವರು ಹಾಗೂ ಮತ್ತಾವರ ಗ್ರಾಮಸ್ಥರು ಮನವಿ ಮಾಡಿದ್ದರು.
ಗ್ರಾಮಸ್ಥರ ಕೋರಿಕೆಯಂತೆ 50 ಲಕ್ಷ ರೂ. ಮಂಜೂರು ಮಾಡಿಸಿದ್ದು, ಈ ಅನುದಾನವನ್ನು ಬಳಸಿ ಸ್ಥಗಿತಗೊಂಡಿರುವ ಮತ್ತಾವರ
ಜೈನ ಸಮುದಾಯ ಭವನವನ್ನು ಪೂರ್ಣಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.