spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಜ್ಯಸಭೆಯ 50 ಗಂಟೆ ಕಾರ್ಯಕಲಾಪದಲ್ಲಿ 40 ಗಂಟೆಗಳಷ್ಟು ಪ್ರತಿಭಟನೆಯಲ್ಲೇ ವ್ಯರ್ಥ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸಂಸತ್ ನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ರಾಜ್ಯಸಭೆಯ ಮೊದಲ ಎರಡು ವಾರಗಳಲ್ಲಿ 50 ಗಂಟೆಗಳ ಪೈಕಿ 40 ಗಂಟೆಗಳಷ್ಟು ಕಾರ್ಯಾವಧಿ ಪೋಲಾಗಿದೆ.
ರಾಜ್ಯಸಭೆಯ ಕಾರ್ಯಾಲಯ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಹಾಲಿ ಕಲಾಪದ ಎರಡನೇ ವಾರದಲ್ಲಿ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಉತ್ಪಾದಕತೆ ಶೇ.13.70 ರಷ್ಟಕ್ಕೆ ಕುಸಿದಿದೆ. ಮೊದಲ ವಾರದಲ್ಲಿ ಈ ಪ್ರಮಾಣ ಶೇ.32.20 ರಷ್ಟಿತ್ತು.
50 ಗಂಟೆಗಳ ಕಾರ್ಯಾವಧಿಯ ಪೈಕಿ 39 ಗಂಟೆ 52 ನಿಮಿಷಗಳು ಪ್ರತಿಭಟನೆಯಲ್ಲೇ ವ್ಯರ್ಥವಾಗಿದೆ. ನಿಗದಿಯಾಗಿದ್ದ ಸಮಯಕ್ಕಿಂತಲೂ 1 ಗಂಟೆ 12 ನಿಮಿಷಗಳಿಗಿಂತಲೂ ಹೆಚ್ಚಾಗಿ ಕಲಾಪ ನಡೆದಿದೆ. ಇದಕ್ಕೆ ಹೋಲಿಕೆ ಮಾಡಿದಲ್ಲಿ ಉತ್ಪಾದಕತೆ ಮತ್ತಷ್ಟು ಕಡಿಮೆಯಾಗುತ್ತಿತ್ತು. ಇದೇ ಮೊದಲ ಬಾರಿಗೆ ರಾಜ್ಯಸಭೆಯ ಕಾರ್ಯಾಲಯ ದಿನ ನಿತ್ಯದ ಬುಲೆಟಿನ್ ಗಳನ್ನು ಪ್ರಸಾರ ಮಾಡುತ್ತಿದ್ದು, ಮೇಲ್ಮನೆಯಲ್ಲಿ ಪ್ರಸ್ತಾಪಿಸಲಾಗದ ವಿಷಯಗಳ ಬಗ್ಗೆಯೂ ಮಾಹಿತಿ ನೀಡುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss