Thursday, August 18, 2022

Latest Posts

ಟಿ.ವಿ.ಎಸ್ ಮೋಟಾರ್ಸ್‍ನ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ ನಿಂದ 50 ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ, ಚಾಮರಾಜನಗರ:

ಟಿ.ವಿ.ಎಸ್ ಮೋಟಾರ್ಸ್‍ನ ಸಾಮಾಜಿಕ ಸೇವೆಗಳ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಕೋವಿಡ್ ಸೋಂಕಿತರಿಗೆ ನೆರವಾಗಲು 50 ಆಕ್ಸಿಜನ್ ಕಾನ್ಸ್‍ನ್‍ಟ್ರೇಟರ್ಸ್‍ಗಳನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರಿಗೆ ಇಂದು ಹಸ್ತಾಂತರಿಸಲಾಯಿತು.
ಕೋವಿಡ್ ನಿಯಂತ್ರಣಕ್ಕೆ ನೀಡುವ ಸೇವೆಗಳನ್ನು ಮಾಡುತ್ತಾ ಬಂದಿರುವ ಟಿ.ವಿ.ಎಸ್ ಮೋಟಾರ್ಸ್‍ನ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್‍ನ ಹಿರಿಯ ನಿರ್ದೇಶಕರಾದ ಪಾಂಡುರಂಗ ಬಿ. ನಾಯಕ್, ಟಿ.ವಿ.ಎಸ್ ಮೋಟಾರ್‍ನ ಪ್ರತಿನಿಧಿಗಳಾದ ಜಯಣ್ಣ, ರೋಹನ್ ಮಲ್ಲಿಕ್ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಆಕ್ಸಿಜನ್ ಕಾನ್ಸ್‍ನ್‍ಟ್ರೇಟರ್ಸ್‍ಗಳನ್ನು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರಿಗೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಜಿಲ್ಲೆಗೆ ಆಕ್ಸಿಜನ್ ಕಾನ್ಸ್‍ನ್‍ಟ್ರೇಟರ್ಸ್‍ಗಳನ್ನು ನೀಡಿದ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ ಅವರ ಸೇವಾ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್‍ನ ಸಮುದಾಯ ಅಭಿವೃದ್ಧಿ ಅಧಿಕಾರಿ ಶಾಂತರಾಜು, ಮಹದೇವಸ್ವಾಮಿ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!