ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾನಿಪೂರಿ ತಿಂದ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಜಾರ್ಖಂಡ್ ರಾಜ್ಯದಲ್ಲಿ ನಡೆದಿದೆ. ಅಸ್ವಸ್ಥರಾದವರಲ್ಲಿ 40 ಮಕ್ಕಳು ಸೇರಿದಂತೆ 10 ಮಹಿಳೆಯರೂ ಸೇರಿದ್ದಾರೆ.
ಜಾರ್ಖಂಡ್‌ನ ಕೊಡೆರ್ಮಾ ಜಿಲ್ಲೆಯ ಲೋಕೈ ಪಂಚಾಯತ್‌ನ ಗೋಸೈನ್ ಟೋಲಾ ಪ್ರದೇಶದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರ ಬಳಿ ಮಕ್ಕಳು ಮತ್ತು ಮಹಿಳೆಯರು ಪಾನಿಪೂರಿ ತಿಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ವಾಂತಿ ಮತ್ತು ಭೇದಿಯಿಂದ ತೀವ್ರ ಅಸ್ವಸ್ಥರಾದವರನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಕೊಡೆರ್ಮಾದ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರೋಗಿಗಳನ್ನು ಪರೀಕ್ಷಿಸಿದ ವೈದ್ಯರು ಕಲುಷಿತ ಆಹಾರ ಸೇವಿಸಿದ್ದೇ ಇವರ ಅನಾರೋಗ್ಯಕ್ಕೆ ಕಾರಣ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ರೋಗಿಗಳಲ್ಲಿ 9-15 ವರ್ಷ ವಯಸ್ಸಿನ ಮಕ್ಕಳು ಸೇರಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.
ಮತ್ತೊಂದೆಡೆ, ಬೀದಿಬದಿ ವ್ಯಾಪಾರಿಯಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ರಾಂಚಿಯ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಬಡೆಯುತ್ತಿದೆ.