ಎಟಿಎಂಗೆ ಸಿಬ್ಬಂದಿ ಸೋಗಿನಲ್ಲಿ ಬಂದ ವ್ಯಕ್ತಿಯಿಂದ ದಂಪತಿಗೆ 50 ಸಾವಿರ ವಂಚನೆ

ಹೊಸದಿಗಂತ ವರದಿ, ಮದ್ದೂರು:

ಪಟ್ಟಣದ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಬಂದು ವ್ಯಕ್ತಿಯೊಬ್ಬ ದಂಪತಿಗೆ 50 ಸಾವಿರ ವಂಚಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಮಹದೇವಯ್ಯಮಮತ ದಂಪತಿ ಹಣ ಕಳೆದುಕೊಂಡವರಾಗಿದ್ದಾರೆ.
ಘಟನೆ ವಿವರ: ಮಹದೇವಯ್ಯಮಮತ ದಂಪತಿಗಳು ಫೆ.2 ರಂದು ತಮ್ಮ ಪುತ್ರ ಹೇಮಂತ್‌ಗೌಡ ಬೆಂಗಳೂರಿನಲ್ಲಿ ಸ್ಟಾಪ್ಟ್ ವೇರ್ ಇಂಜಿನಿಯರಿಂಗ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ವ್ಯಾಸಂಕ್ಕಾಗಿ ಮಾಡಿದ ಕೈ ಸಾಲ ತೀರಿಸುವ ಉದ್ದೇಶದಿಂದ ಮುದಗೆರೆ ಸಹಕಾರ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡಮಾನ ಇಟ್ಟು ಇದರಲ್ಲಿ 50 ಸಾವಿರ ರೂ.ಗಳನ್ನು ಬ್ಯಾಂಕ್‌ನಲ್ಲಿ ಮಗನ ಖಾತೆಗೆ ಜಮೆ ಮಾಡಲು ಬಂದಿದ್ದರು.
ಈ ವೇಳೆ ಬ್ಯಾಂಕ್‌ನಲ್ಲಿ ಅಂದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಪರಿಣಾಮ ಬ್ಯಾಂಕ್‌ನ ಸಿಬ್ಬಂದಿ ಎಟಿಎಂನಲ್ಲಿ ಹಣ ಡಿಪಾಜಿಟ್ ಮಾಡುವಂತೆ ತಿಳಿಸಿದ್ದಾರೆ. ಇದೇ ವೇಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿಯಂತೆ ಬಟ್ಟೆಗೆ ಬ್ಯಾಡ್ಜ್ ಧರಿಸಿಕೊಂಡು ಬಂದು ಎಟಿಎಂನಲ್ಲಿ 50 ಸಾವಿರ ಹಣ ಡಿಪಾಜಿಟ್ ಮಾಡುವಂತೆ ನಾಟಕವಾಡಿ ದಂಪತಿಗಳಿಗೆ ವಂಚಿಸಿ ಹಣ ಪಡೆದು ಪರಾರಿಯಾಗಿದ್ದಾನೆ.
ಇದರಿಂದ ಆತಂಕಗೊಂಡ ದಂಪತಿ ಬ್ಯಾಂಕ್ ಸಿಬ್ಬಂದಿಗೆ ಈ ವಿಷಯ ತಿಳಿಸಿದ್ದಾರೆ. ಎಟಿಎಂನಲ್ಲಿ ತಾಂತ್ರಿಕ ದೋಷವಾಗಿದ್ದರೆ ಈ ರೀತಿಯಾಗಬಹುದು ಆದ್ದರಿಂದ ಏಳು ದಿನಗಳು ಬಿಟ್ಟುಕೊಂಡು ಬನ್ನಿ ನಿಮಗೆ ಹಣ ಸಿಗುತ್ತದೆ ಎಂದು ಕಳುಹಿಸಿದ್ದಾರೆ. ಏಳು ದಿನಗಳ ನಂತರವೂ ಹಣ ಮಗನ ಖಾತೆಗೆ ಬಂದ ಹಣ ಜಮೆಯಾಗದ ಪರಿಣಾಮ ದಂಪತಿ ಬ್ಯಾಂಕ್‌ಗೆ ಬಂದು ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಬ್ಯಾಂಕ್‌ನವರು ಕೂಲಂಕುಷವಾಗಿ ಪರಿಶೀಲನೆ ಮಾಡಿದಾಗ ದಂಪತಿಗೆ ವ್ಯಕ್ತಿಯೊಬ್ಬ ವಂಚನೆ ಮಾಡಿರುವುದು ಆ ದಿನದ ಸಿಸಿ ಟಿವಿ ಫುಟೇಜ್ ಪರಿಶೀಲನೆ ಮಾಡಿದಾಗ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!