ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

500 ಕ್ಕಿಂತ ಹೆಚ್ಚು ಕೇಸ್​ಗಳಿರುವ ಜಿಲ್ಲೆಗಳಲ್ಲಿ ‘ಕೊರೋನಾ ಕರ್ಫ್ಯೂ’: ಸಿಎಂ ಯೋಗಿ ಆದಿತ್ಯನಾಥ್ ಆದೇಶ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉತ್ತರ ಪ್ರದೇಶದಲ್ಲಿ ಕೊರೋನಾ ಸೋಂಕು ಹೆಚ್ಚಿದ ಹಿನ್ನೆಲೆ 500 ಕ್ಕಿಂತ ಹೆಚ್ಚು ಸಕ್ರಿಯ ಸೋಂಕು ಪ್ರಕರಣಗಳಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ಹೊರಡಿಸಿದೆ.
ಅಲ್ಲದೇ 1 ರಿಂದ 12 ನೇ ತರಗತಿವರೆಗಿನ ಎಲ್ಲಾ ಶಾಲೆ, ಕಾಲೇಜು ಮತ್ತು ಕೋಚಿಂಗ್ ಸೆಂಟರ್​ಗಳನ್ನೂ ಏಪ್ರಿಲ್ 30 ರವರೆಗೂ ಕ್ಲೋಸ್ ಮಾಡಿ ಆದೇಶ ಹೊರಡಿಸಿದೆ.
ಇನ್ನು ಈಗಾಗಲೇ ಘೋಷಿಸಲಾಗಿರುವ ಪರೀಕ್ಷೆಗಳನ್ನು ಮುಂದುವರೆಸುವಂತೆ ಹೇಳಲಾಗಿದ್ದು ಸಿಬ್ಬಂದಿಯನ್ನು ಅವಶ್ಯಕ ಕೆಲಸಗಳಿಗಾಗಿ ಕರೆಯಬಹುದು ಎಂದು ಹೇಳಿದ್ದಾರೆ.
ಇನ್ನು 1 ರಿಂದ 8 ನೇ ತರಗತಿವರೆಗಿನ ಶಾಲೆಗಳನ್ನ ಏಪ್ರಿಲ್ 11 ರವರೆಗೆ ಮುಚ್ಚಲಾಗಿತ್ತು.
ಈಗಾಗಲೇ ಉತ್ತರ ಪ್ರದೇಶದ ರಾಜಧಾನಿ ಲಖನೌ, ಕಾನ್​ಪುರ್ ಮತ್ತು ವಾರಾಣಸಿಗಳಲ್ಲಿ ಏಪ್ರಿಲ್ 8 ರಿಂದ ನೈಟ್ ಕರ್ಫ್ಯೂ ಘೋಷಿಸಲಾಗಿದ್ದು ಇದೀಗ ಕೇಸ್​ಗಳು ಹೆಚ್ಚಿದ ಹಿನ್ನೆಲೆ 500 ಕ್ಕಿಂತ ಹೆಚ್ಚು ಆಯಕ್ಟಿವ್ ಕೇಸ್​ಗಳಿರುವ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುವಂತೆ ನೈಟ್ ಕರ್ಫ್ಯೂ ಜಾರಿಗೆ ಆದೇಶ ಹೊರಡಿಸಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss