Friday, July 1, 2022

Latest Posts

ಜಾಕ್ವೆಲಿನ್ ಗಾಗಿ 500 ಕೋಟಿ ರೂ. ಬಜೆಟ್​ ನ ಸಿನಿಮಾ ಮಾಡಲು ಮುಂದಾಗಿದ್ದ ಸುಖೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಕೋಟಿ ವಂಚನೆ ಪ್ರಕರಣ ಸಂಬಂಧಿಸಿ ಹಲವು ವಿಚಾರಗಳು ಹೊರಬರುತ್ತಿದ್ದು, ಸುಖೇಶ್ ಚಂದ್ರಶೇಖರ್ ಜೊತೆ ತಳುಕು ಹಾಕಿಕೊಂಡಿರುವ ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಕುರಿತ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ.
ಅದನೆಂದರೆ ಸುಖೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಗೆ 500 ಕೋಟಿ ರೂ. ಬಜೆಟ್​ ಸಿನಿಮಾ ಮಾಡಲು ಮುಂದಾಗಿದ್ದರು.
ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಖೇಶ್ ಚಂದ್ರಶೇಖರ್​​ನನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿದ್ದರು. ಈ ವೇಳೆ ಆತನ ಹಾಗೂ ನಟಿ ಜಾಕ್ವೆಲಿನ್ ನಡುವಿನ ಸಂಬಂಧದ ಮಾಹಿತಿ ಬಹಿರಂಗವಾಗಿತ್ತು. .ದಿನದಿಂದ ದಿನಕ್ಕೆ ಜಾಕ್ವೆಲಿನ್ ಬಗ್ಗೆ ಹೊಸ ಹೊಸ ವಿಚಾರ ಬಾಯ್ಬಿಡುತ್ತಿರುವ ಸುಖೇಶ್, ಆಕೆಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದರು.
ಇದರ ಬೆನ್ನಲ್ಲೇ ಜಾಕ್ವೆಲಿನ್-ಸುಖೇಶ್​​ರ ಕೆಲ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೀಗ 500 ಕೋಟಿ ರೂ. ಬಜೆಟ್​​ನ ಸೂಪರ್ ಹೀರೋ​ ಪ್ರಾಜೆಕ್ಟ್​ ಮಾಡಲು ಮುಂದಾಗಿದ್ದ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss