Tuesday, August 16, 2022

Latest Posts

ಅಸ್ಸಾಂ- ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 5,000 ಮುಸ್ಲಿಮರ ತೆರವು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಸ್ಸಾಂ ನ ದಾರಂಗ್ ಜಿಲ್ಲೆಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನೆಲೆಯೂರಿದ್ದ 5000 ಮುಸ್ಲೀಮರನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.
ಸ್ಥಳೀಯ ಆಡಳಿತ ಸರ್ಕಾರವು ಅಕ್ರಮವಾಗಿ ವಾಸಿಸುತ್ತಿದ್ದ 800 ಮಂದಿ ವಲಸೆ ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದೆ.
ನೂರಾರು ಪೊಲೀಸರು ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾದರು. ಇದೇ ವೇಳೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಎರಡು ಮಸೀದಿಗಳು ಹಾಗೂ ಮದ್ರಾಸಗಳನ್ನು ಕೂಡ ನೆಲಸಮ ಮಾಡಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಟ್ವೀಟ್ ಮಾಡಿದ್ದು, ಕಾನೂನುಬಾಹಿರ ಅತಿಕ್ರಮಗಳ ವಿರುದ್ಧ ನಮ್ಮ ಅಭಿಯಾನ ಮುಂದುವರೆಸುತ್ತಿದ್ದೇವೆ. ದಾರಂಗ್‌ ನ ಜಿಲ್ಲಾ ಆಡಳಿತದ ಕಾರ್ಯದಿಂದ ಸಂತಸವಾಗಿದೆ.  ಅಸ್ಸಾಂ ಪೊಲೀಸರಿಗೆ ಅಭಿನಂದನೆ. ಸುಮಾರು 4500 ಬಿಘಾ ಜಮೀನುಗಳನ್ನು (1 ಬಿಘಾ ಅಂದರೆ ಸುಮಾರು 24 ಗುಂಟೆ ಪ್ರದೇಶ) ತೆರವುಗೊಳಿಸಿ, ಅಕ್ರಮವಾಗಿ ನೆಲಸಿದ್ದ 800 ಮಂದಿಯನ್ನು ಹೊರಹಾಕಿದ್ದಾರೆ. 4 ಕಾನೂನುಬಾಹಿರ ಧಾರ್ಮಿಕ ಕ್ಷೇತ್ರಗಳು ಹಾಗೂ ಖಾಸಗಿ ಸಂಸ್ಥೆಯನ್ನು ನೆಲಸಮಗೊಳಿಸಲಾಗಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss