Thursday, August 18, 2022

Latest Posts

ಕೊರೋನಾದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 50 ಸಾವಿರ ಧನ ಸಹಾಯ ನೀಡಿದ ಸಚಿವ ಬಿ.ಸಿ.ಪಾಟೀಲ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ , ಹಾವೇರಿ:

ಕೊರೋನಾದ ಎರಡನೇ ಅಲೆಯಿಂದ ಮೃತಪಟ್ಟ ಹಿರೇಕೆರೂರ ಮತ ಕ್ಷೇತ್ರ ವ್ಯಾಪ್ತಿಯ ಕುಟುಂಬಗಳಿಗೆ ತಲಾ 50 ಸಾವಿರ ರೂಗಳನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ವೈಯಕ್ತಿಕವಾಗಿ ಸೋಮವಾರ ನೀಡಿದರು.
ಜಿಲ್ಲೆಯ ಹಿರೇಕೆರೂರ ಮತ ಕ್ಷೇತ್ರದ ನಿಟ್ಟೂರ ಗ್ರಾಮದ ಮಲ್ಲಿಕಾರ್ಜುನ ಬಳ್ಳಾರಿ, ಹಿರೇಕೊಣತಿ ಗ್ರಾಮದ ಬಸನಗೌಡ ಕವಲಿ, ಹಂಸಭಾವಿಯ ಶಿವಾನಂದಯ್ಯ ಫಕೀರಸ್ವಾಮಿಮಠ, ರಮೀಜಾಬಾಯಿ ದೊಡ್ಡಮನಿ, ರಜೋತ್ತಮ ಗೋಕರ್ಣಕರ, ಯೋಗಿಕೊಪ್ಪ ಗ್ರಾಮದ ಬಸನಗೌಡ ಪಾಟೀಲ, ವಡೇನಪುರ ಪಕೀರಪ್ಪ ಶಿವಣ್ಣನವರ, ಅರಳಿಕಟ್ಟಿ ಗ್ರಾಮದ ಗುಡ್ಡಪ್ಪ ಎಲೆದಳ್ಳಿ, ಆಲದಗೇರಿ ಗ್ರಾಮದ ಜಗದೀಶ ಕುಸನೂರ ಹಾಗೂ ಕಳಕೊಂಡ ಗ್ರಾಮದ ರವಿ ಮುದಿಗೌಡರ ಅವರ ಮನೆಗೆಗಳಿಗೆ ತೆರಳಿ ತಲಾ ೫೦ ಸಾವಿರ ರೂಗಳ ಧನ ಸಹಾಯವನ್ನು ಮಾಡಿದರು. ಈ ಸಂದರ್ಭದಲ್ಲಿ ಅವರ ಪತ್ನಿ ವನಜಾ ಪಾಟೀಲ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!