Monday, July 4, 2022

Latest Posts

30 ದಿನಗಳಲ್ಲಿ 52 ಕ್ಕೂ ಹೆಚ್ಚು ಪತ್ರಕರ್ತರನ್ನು ಬಲಿಪಡೆದ ಕೊರೋನಾ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………………………. 

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೇವಲ ಸರಕಾರವಲ್ಲದೇ ಈ ವಿಷಯಗಳನ್ನು ಸುದ್ದಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳ ಕೂಡ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಮಾಧ್ಯಮಗಳು ದೇಶದ ಜನತೆಗೆ ಕೊರೋನಾದ ಸೋಂಕಿನ ತೀವ್ರತೆಯ ಕುರಿತು ಅರಿವು ಮೂಡಿಸುವ ಪ್ಯಯತ್ನ ನಡೆಸುತ್ತಿದ್ದಾರೆ. ಆದರೂ ಕೂಡ ಜನರು ಈ ನಿಯಮಗಳನ್ನು ಮೀರಿ ವರ್ತಿಸುವ ಘಟನೆಗಳು ನಡೆಯುತ್ತಿದೆ.

ಕಳೆದ ಒಂದೇ ತಿಂಗಳಲ್ಲಿ ಕೊರೋನಾ ಸೋಂಕಿಗೆ ಜನರಿಗೆ ಸುದ್ದಿ ತಲುಪಿಸುವ ಮಾಧ್ಯಮಗಳ 52 ಮಂದಿ ಪತ್ರಕರ್ತರು ಸಾವನ್ನಪ್ಪಿದ್ದಾರೆ.

ಹೌದು, ಒಂದು ತಿಂಗಳಲ್ಲಿ ಜನರಿಗೆ ಪ್ರತಿಕ್ಷಣ ಮಾಹಿತಿ ನೀಡುವ ಪತ್ರಕರ್ತರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಂದು ರಾಷ್ಟ್ರೀಯ ಮಾಧ್ಯಮ ಆಜ್​ತಕ್​ನ ಖ್ಯಾತ ಪತ್ರಕರ್ತ ರೋಹಿತ್ ಸರ್ದಾನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಒಂದೇ ಟೈಮ್ಸ್ ಆಫ್ ಇಂಡಿಯಾದ ಪತ್ರಕರ್ತೆ ನೀಲಾಕ್ಷಿ ಭಟ್ಟಾಚಾರ್ಯ ಸೋಂಕಿನಿಂದಲೇ ಕೊನೆಯುಸಿರೆಳೆದಿದ್ದಾರೆ.

ಈ ವರ್ಷದ ಏಪ್ರಿಲ್ ತಿಂಗಳು ಪತ್ರಕರ್ತರ ಪಾಲಿಗೆ ಕರಾಳ ತಿಂಗಳು, ಕಳೆದ 28 ದಿನಗಳಲ್ಲಿ 52 ಮಂದಿ ಪತ್ರಕರ್ತರನ್ನು ಭಾರತ ಕಳೆದುಕೊಂಡಿದೆ. ಒಂದು ಅಂದಾಜಿನ ಪ್ರಕಾರ ದಿನಕ್ಕೆ ಇಬ್ಬರಂತೆ ಪತ್ರಕರ್ತರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ರೇಟ್​ ದ ಡಿಬೇಟ್​ನ ಅಂಕಿ ಅಂಶಗಳ ಪ್ರಕಾರ,
ಏಪ್ರಿಲ್ 2020ರಿಂದ ಏಪ್ರಿಲ್ 2021 ರವರೆಗೆ ಬರೋಬ್ಬರಿ 101 ಮಂದಿ ಪತ್ರಕರ್ತರು ಸಾವನ್ನಪ್ಪಿದ್ದಾರೆ. ಕಳೆದ 4 ತಿಂಗಳಲ್ಲಿ 56 ಪತ್ರಕರ್ತರು ರಾಜಧಾನಿ ದೆಹಲಿಯಲ್ಲಿ ಸಾವನ್ನಪ್ಪಿದ್ದಾರೆ.

ಮಾಧ್ಯಮಗಳಲ್ಲಿ ದಿನಂಪ್ರತಿ ಕೊರೋನಾ ಕುರಿತು ಎಷ್ಟೇ ಅರಿವು ಮೂಡಿಸುವ ಸುದ್ದಿಗಳು ಬಿತ್ತರವಾದರೂ, ವೈದ್ಯರು, ಸರ್ಕಾರಗಳು ಕೈಮುಗಿದು ಬೇಡಿಕೊಂಡರೂ ಅದೆಷ್ಟೋ ಜನರು ಸಾಮಾಜಿಕ ಅಂತರ, ಮಾಸ್ಕ್​​ ಕಡ್ಡಾಯದಂಥ ನಿಯಮಗಳನ್ನು ಪಾಲಿಸುತ್ತಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss