Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಇಂದು 555 ಮಂದಿಗೆ ಕೊರೋನಾ ಸೋಂಕು: 331 ಜನರು ಗುಣಮುಖ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………..

ಹೊಸದಿಗಂತ ವರದಿ,ಕಾಸರಗೋಡು:

ಜಿಲ್ಲೆಯಲ್ಲಿ ಗುರುವಾರ 555 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 547 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 331 ಮಂದಿ ಸೋಂಕುಮುಕ್ತರಾದರು. ಜಿಲ್ಲೆಯಲ್ಲಿ ಗುರುವಾರ ಕೊರೋನಾದಿಂದ ಸಾವು ಸಂಭವಿಸಿಲ್ಲ. ಸೋಂಕಿನಿಂದ ಇದುವರೆಗೆ ಜಿಲ್ಲೆಯಲ್ಲಿ 460 ಜನರು ಅಸುನೀಗಿದ್ದಾರೆ. ಕೇರಳದಲ್ಲಿ ಹೊಸದಾಗಿ 32,097 ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಇದರಲ್ಲಿ 30,456 ಮಂದಿಗೆ ಸಂಪರ್ಕದಿಂದ ವೈರಸ್ ತಗಲಿದೆ. ರಾಜ್ಯದಲ್ಲಿ 21,634 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 4334, ಎರ್ನಾಕುಳಂ 3768, ಕಲ್ಲಿಕೋಟೆ 3531, ಪಾಲಕ್ಕಾಡು 2998, ಕೊಲ್ಲಂ 2908, ಮಲಪ್ಪುರಂ 2664, ತಿರುವನಂತಪುರ 2440, ಕೋಟ್ಟಾಯಂ 2121, ಆಲಪ್ಪುಳ 1709, ಕಣ್ಣೂರು 1626, ಪತ್ತನಂತ್ತಿಟ್ಟ 1267, ಇಡುಕ್ಕಿ 1164, ವಯನಾಡು 1012, ಕಾಸರಗೋಡು 555 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೇರಳದಲ್ಲಿ ಗುರುವಾರ ಕೋವಿಡ್ ಸೋಂಕು ಬಾಧಿಸಿ 188 ಮಂದಿ ಮೃತಪಟ್ಟರು. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 21,149 ಜನರು ಸಾವಿಗೀಡಾದರು. ಕೇರಳದಲ್ಲಿ ಗುರುವಾರ ಶೇಕಡಾ 18.41ರಷ್ಟು ಕೊರೋನಾ ಟೆಸ್ಟ್ ಪಾಸಿಟಿವಿಟಿ ರೇಟ್ (ಟಿಪಿಆರ್) ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss