ಹೊಸದಿಗಂತ ಡಿಜಿಟಲ್ ಡೆಸ್ಕ್ :
ಆಫ್ರಿಕನ್ ರಾಷ್ಟ್ರ ಸುಡಾನ್ ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಘರ್ಷಣೆಯ ಪರಿಣಾಮ ಕನಿಷ್ಠ 56 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ಈ ಘರ್ಷಣೆಯು ಇನ್ನೂ ಮುಂದುವರಿದಿದ್ದು ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಖಾರ್ಟೂಮ್ ನಲ್ಲಿರುವ ಅಧ್ಯಕ್ಷರ ನಿವಾಸ, ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳನ್ನು ಅರೆಸೇನಾ ಪಡೆ ವಶದಲ್ಲಿವೆ ಎಂದು ಘೋಷಿಸುತ್ತಿದ್ದಂತೆ ಸುಡಾನ್ ಸೇನೆ ಪಡೆ ದಾಳಿ ಮಾಡಿದೆ. ಹೀಗಾಗಿ ಬಾಂಬ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಎರಡು ಸೇನಾಪಡೆ ದಾಳಿ ಮಾಡಿದ್ದರಿಂದ ಈ ಘರ್ಷಣೆ ಸಂಭವಿಸಿದೆ.
ಶನಿವಾರ ಬೆಳಗ್ಗಿನಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ನಡೆಯುತ್ತಿದ್ದ ಸೈನಿಕರ ಸಂಘರ್ಷ ತದನಂತರ ತೀವ್ರ ಸ್ವರೂಪ ಪಡೆದುಕೊಂಡಿತು. ಈ ವೇಳೆ ಗುಂಡಿನ ಚಕಮಕಿಯಿಂದಾಗಿ ಸಾವುನೋವಿಗೀಡಾದ ಅಮಾಯಕ ನಾಗರಿಕರ ಸಂಖ್ಯೆಗಳನ್ನು ಮಾತ್ರ ಪ್ರಕಟಿಸಲಾಗಿದೆ.