Thursday, August 11, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಇಂದು 597 ಮಂದಿ ಗುಣಮುಖ: 553 ಜನರಿಗೆ ಕೊರೋನಾ ಪಾಸಿಟಿವ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸದಿಗಂತ ವರದಿ,ಕಾಸರಗೋಡು:

ಜಿಲ್ಲೆಯಲ್ಲಿ ಸೋಮವಾರ 553 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 543 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 597 ಮಂದಿ ಸೋಂಕುಮುಕ್ತರಾದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 7798 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 7202 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 11,447 ಜನರು ಗುಣಮುಖರಾದರು.
ಕೇರಳದ ಜಿಲ್ಲೆಗಳ ಪೈಕಿ ತೃಶೂರು ಜಿಲ್ಲೆಯಲ್ಲಿ 1092, ಕಲ್ಲಿಕೋಟೆ 780, ಕೊಲ್ಲಂ 774, ಮಲಪ್ಪುರಂ 722, ತಿರುವನಂತಪುರ 676, ಪಾಲಕ್ಕಾಡು 664, ಆಲಪ್ಪುಳ 602, ಎರ್ನಾಕುಳಂ 582, ಕಾಸರಗೋಡು 553, ಕಣ್ಣೂರು 522, ಕೋಟ್ಟಾಯಂ 363, ಪತ್ತನಂತ್ತಿಟ್ಟ 202, ವಯನಾಡು 137, ಇಡುಕ್ಕಿ ಜಿಲ್ಲೆಯಲ್ಲಿ 129 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ಸೋಂಕು ಬಾಧಿಸಿ ಸೋಮವಾರ ಕೇರಳದಲ್ಲಿ 100 ಮಂದಿ ಮೃತಪಟ್ಟರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 14,686 ಜನರು ಸಾವಿಗೀಡಾದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss