ದೇಶದಲ್ಲಿ ಈ ವರ್ಷ ಅಂತ್ಯದ ವೇಳೆ ಬರಲಿದೆ 5G ಸೇವೆ: ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಶುಕ್ರವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ಸಚಿವ ದೇವು ಸಿನ್ಹ ಚೌಹಾಣ್, 5G ಸೇವೆಗಾಗಿ ಸ್ಪೆಕ್ಟ್ರಮ್ ಹರಾಜು ಕೂಡ ಶೀಘ್ರದಲ್ಲೇ ನಡೆಯಲಿದೆ.ದೇಶದಲ್ಲಿ 5ಜಿ ತಂತ್ರಜ್ಞಾನ ಪ್ರಾರಂಭಕ್ಕಾಗಿ ನಾಲ್ಕು ಕಂಪನಿಗಳಿಗೆ ತರಂಗಾಂತರಗಳನ್ನು ರೂಪಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಪ್ರಯೋಗಗಳು ಪೂರ್ಣಗೊಂಡು, ದೇಶಾದ್ಯಂತ 5ಜಿ ಸೇವೆ ಜನರಿಗೆ ಸಿಗಲಿದೆ ಎಂದು ತಿಳಿಸಿದರು.
ಇನ್ನು ಬಿಎಸ್​ಎನ್​ಎಲ್​ ಕೂಡ ಈ ವರ್ಷ 4 ಜಿ ಸೇವೆಯನ್ನು ಆರಂಭಿಸಲಿದೆ. ಕಳೆದ 7 ವರ್ಷಗಳಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಮಹಾನ್​ ಕ್ರಾಂತಿಯಾಗಿದೆ. ಅಂತರ್ಜಾಲ ಬಳಕೆಯ ಮೇಲೆ ಸುಂಕಗಳು ಕಡಿಮೆ ಇದ್ದ ಕಾರಣ ಡೇಟಾ ಬಳಕೆಯು ಹೆಚ್ಚಿದೆ ಎಂದು ಅವರು ನೀಡಿದರು.
ದೇಶದಲ್ಲಿ ಮೊಬೈಲ್ ಬಳಕೆದಾರರ ಪ್ರಮಾಣ ಅಧಿಕವಾಗುತ್ತಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆ 2020 ರಲ್ಲಿದ್ದ 1157.75 ಮಿಲಿಯನ್‌ನಿಂದ 2021 ರ ವೇಳೆಗೆ ಅದು 1180.96 ಮಿಲಿಯನ್‌ಗೆ ಏರಿದೆ ಎಂದು ಮಾಹಿತಿ ನೀಡಿದರು,.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!