Monday, March 27, 2023

Latest Posts

ನ್ಯೂಜಿಲೆಂಡ್: ವೆಲ್ಲಿಂಗ್ಟನ್‌ನ ವಾಯುವ್ಯದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನ ವಾಯುವ್ಯದಲ್ಲಿ ಇಂದು 6.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಭೂಕಂಪವು 57.4 ಕಿಮೀ ಮಧ್ಯಮ ಆಳದಲ್ಲಿ ಸಂಭವಿಸಿದೆ. ರಾತ್ರಿ 7.38ಕ್ಕೆ 76 ಕಿ.ಮೀ ಆಳದಲ್ಲಿ ಭೂಕಂಪವಾಗಿದೆ. ಇದು ನ್ಯೂಜಿಲೆಂಡ್‌ ವೆಲ್ಲಿಂಗ್ಟನ್‌ನ ವಾಯುವ್ಯಕ್ಕೆ 50ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು.

15 ನಿಮಿಷಗಳಲ್ಲಿ 31000 ಕ್ಕೂ ಹೆಚ್ಚು ಜನರು ಭೂಕಂಪದ ಅನುಭವವನ್ನು ಅನುಭವಿಸಿದ್ದಾರೆ ಎಂದು ಜಿಯೋನೆಟ್‌ನಲ್ಲಿ ವರದಿ ಮಾಡಿದೆ.

ನ್ಯೂಜಿಲೆಂಡ್ ನಲ್ಲಿ ಈಗಾಗಲೇ ಗ್ಯಾಬ್ರಿಯೆಲ್ ಚಂಡಮಾರುತದಿಂದ ಉಂಟಾದ ದುರಂತದಿಂದ ನಾಲ್ಕು ಜನರು ಮೃತಪಟ್ಟಿದ್ದು, 10,500 ಜನರನ್ನು ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಇಂತಹ ಘಟನೆಗಳು ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!