Thursday, March 23, 2023

Latest Posts

ಸರಣಿ ಭೂಕಂಪಗಳಿಗೆ ಜಗತ್ತು ತತ್ತರ: ಮೊನ್ನೆ ಟರ್ಕಿ-ಸಿರಿಯಾ, ನಿನ್ನೆ ನ್ಯೂಜಿಲೆಂಡ್‌ ಇಂದು ಫಿಲಿಪೈನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟರ್ಕಿ ಮತ್ತು ಸಿರಿಯಾ ಈಗಾಗಲೇ ಸರಣಿ ಭೂಕಂಪಗಳಿಂದ ತತ್ತರಿಸಿರುವ ಬೆನ್ನಲ್ಲೇ ಸಾಲು ಸಾಲಾಗಿ ಭೂಕಂಪ ವರದಿಯಾಗುತ್ತಿವೆ.  ನ್ಯೂಜಿಲೆಂಡ್ ನಲ್ಲಿ ಬುಧವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದ್ದರೆ, ಇಂದು ಫಿಲಿಪೈನ್ಸ್‌ನಲ್ಲಿ ಗುರುವಾರ (ಫೆಬ್ರವರಿ 16, 2023) ಭೂಕಂಪ ಸಂಭವಿಸಿದೆ.

ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು. ಸ್ಥಳೀಯ ಕಾಲಮಾನದ ಪ್ರಕಾರ, ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಫಿಲಿಪೈನ್ಸ್‌ನಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ. ಭೂಕಂಪದ ಕೇಂದ್ರಬಿಂದುವು ಮಾಸ್ಬೇಟ್ ಪ್ರಾಂತ್ಯದ ಮಿಯಾಗಾ ಗ್ರಾಮದಿಂದ 11 ಕಿಲೋಮೀಟರ್ ದೂರದಲ್ಲಿದೆ ಎಂದು ಯುಎಸ್ಜಿಎಸ್ ಬಹಿರಂಗಪಡಿಸಿದೆ.

ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಭೂಕಂಪಗಳು ಭಯಾನಕವಾಗಿವೆ. ಭೂಕಂಪದ ಅವಶೇಷಗಳಿಂದ ಟರ್ಕಿ ಮತ್ತು ಸಿರಿಯಾ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ವಾರ ಕಳೆದರೂ ಇನ್ನೂ ಅನೇಕ ಬದುಕುಳಿದವರು ಅವಶೇಷಗಳಿಂದ ಹೊರಬರುತ್ತಿದ್ದಾರೆ. ಈ ಭೂಕಂಪಗಳು ಎರಡೂ ದೇಶಗಳ ಪ್ರಾಂತ್ಯಗಳಲ್ಲಿ 41,000 ಕ್ಕೂ ಹೆಚ್ಚು ಜನರನ್ನು ಕೊಂದಿವೆ. ಒಂದು ಕಡೆ ರಕ್ಷಣಾ ತಂಡವು ಅವಶೇಷಗಳಿಂದ ಅನೇಕ ಜನರನ್ನು ರಕ್ಷಿಸುತ್ತಿದೆ. ಇನ್ನೊಂದೆಡೆ ಶವಗಳ ರಾಶಿಯ ನಡುವೆಯೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!