ಮೈಸೂರು ಮಹಾನಗರ ಪಾಲಿಕೆಯಲ್ಲಿ 6.11 ಕೋಟಿ ಮೊತ್ತದ ಉಳಿತಾಯ ಬಜೆಟ್‌ ಮಂಡನೆ

ಹೊಸದಿಗಂತ ವರದಿ, ಮೈಸೂರು
ಮೈಸೂರು ಮಹಾ ನಗರ ಪಾಲಿಕೆಯ 2022-23 ನೇ ಸಾಲಿನ ಬಜೆಟ್ ನ್ನು ಪಾಲಿಕೆಯ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷೆ ಎಂ.ಎಸ್. ಶೋಭಾ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಮಂಡಿಸಿದರು.
ಈ ಸಾಲಿನಲ್ಲಿ ಪಾಲಿಕೆಗೆ  99956.35 ಲಕ್ಷ ಆದಾಯ ನಿರೀಕ್ಷಿಸಲಾಗಿದ್ದು, 99345.34 ಲಕ್ಷ ರೂ ವೆಚ್ಚ ಮಾಡಲಾಗಿದೆ. 611.01 ಲಕ್ಷ ರೂ ಉಳಿತಾಯ ಮಾಡುವ ಕುರಿತು ಬಜೆಟ್ ಮಂಡಿಸಲಾಗಿದೆ.
ಪಾಲಿಕೆಯ ಆದಾಯಗಳು:
ಆಸ್ತಿ ತೆರಿಗೆ ಯಿಂದ 16820 ಲಕ್ಷ, ನೀರಿನ ತೆರಿಗೆ ಹಾಗೂ ಒಳಚರಂಡಿ ನಿರ್ವಹಣಾ ಕರದಿಂದ 6335 ಲಕ್ಷ, ಯೋಜನೆ ಗಳು ಮತ್ತು ನಿಬಂಧನೆಗಳು- ನಗರ ಮತ್ತು ಪಟ್ಟಣ ಯೋಜನೆ ಯಡಿ 990.50 ಲಕ್ಷ, ಉದ್ದಿಮೆ ಪರವಾನಗಿ ಶುಲ್ಕ ದಿಂದ 1200 ಲಕ್ಷ ರೂಗಳ ಆದಾಯ ನಿರೀಕ್ಷಿಸಲಾಗಿದೆ.
ನಗರ ಪಾಲಿಕೆಯ ಆಸ್ತಿಗಳಿಂದ ಬರುವ ಬಾಡಿಗೆ ಯಿಂದ 521.93 ಲಕ್ಷರೂ, ರಾಜ್ಯ ಹಣಕಾಸು ಆಯೋಗ ದಿಂದ ಮುಕ್ತ ಅನುದಾನ ದಡಿ 1988 ಲಕ್ಷ ರೂ, ರಾಜ್ಯ ಸರ್ಕಾರದ ಬೀದಿ ದೀಪ ಹಾಗೂ ನೀರು ಸರಬರಾಜು ಸ್ಥಾವರಗಳ ವಿದ್ಯುತ್ ಬಿಲ್ ಅನುದಾನ ವಾಗಿ 9188 ಲಕ್ಷ ರೂ, ರಾಜ್ಯ ಹಣಕಾಸು ಆಯೋಗ ದಿಂದ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ವೇತನ, ಪಿಂಚಣಿ ವಂತಿಕೆ ಅನುದಾನ ವಾಗಿ 7411 ಲಕ್ಷ ರೂ, 15ನೇ ಹಣಕಾಸು ಆಯೋಗದ ಅನುದಾನ 5155 ಲಕ್ಷ ರೂ ನಿರೀಕ್ಷಿಸಲಾಗಿದೆ.
ಮೈಸೂರಿನ ಶಾಸಕರು, ಸಂಸದರ ಅನುದಾನ 125 ಲಕ್ಷ ರೂ, ಮುಖ್ಯ ಮಂತ್ರಿಗಳ ನಗರೋತ್ಥಾನದ ಅನುದಾನ 500 ಲಕ್ಷರೂ,ಹಾಗೂ ಎಸ್.ಎಫ್.ಸಿ ವಿಶೇಷ ಅನುದಾನ 564.46 ಲಕ್ಷ ರೂ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಯಡಿ 2800 ಲಕ್ಷ ರೂ ನಿರೀಕ್ಷಿಸಲಾಗಿದೆ.
ಪ್ರಮುಖ ಯೋಜನೆಗಳು:
ನಗರಪಾಲಿಕೆ ಯಿಂದ ಒಂದು ಸುಸಜ್ಜಿತ ಪಾಲಿಕೆ ಭವನವನ್ನು ನಗರದ ಹೃದಯ ಭಾಗದಲ್ಲಿ ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು 500 ಲಕ್ಷ ರೂ ಕಾಯ್ದಿರಿಸಲಾಗಿದೆ. ನಗರದ ಲ್ಲಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಹಾಗೂ ದುರಸ್ತಿ ಮಾಡಲು ಎರಡು ಆಧುನಿಕ ಯಂತ್ರ ಖರೀದಿಸಲು 500 ಲಕ್ಷ ರೂ, ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ರಸ್ತೆ ಮತ್ತು ವೃತ್ತಗಳ ಅಭಿವೃದ್ಧಿ ಗೆ 500 ಲಕ್ಷ ರೂ, ವಿಜಯ ನಗರ 2 ನೇ ಹಂತದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ರಿಂಗ್ ನಿರ್ಮಾಣ ಮಾಡಲು 350 ಲಕ್ಷ ರೂ, ಕುಂಬಾರ ಕೊಪ್ಪಲು ಪ್ರದೇಶದಲ್ಲಿ ಎರಡು ಎಕರೆ ವಿಸ್ತೀರ್ಣದ ಲ್ಲಿ ಕೆಂಪೇಗೌಡ ಕ್ರೀಡಾಂಗಣ ಅಭಿವೃದ್ಧಿ ಗೆ 200 ಲಕ್ಷರೂ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಸಜ್ಜಿತವಾದ ಪುಟ್ಬಾಲ್‌, ಟೆನ್ನಿಸ್, ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್ , ಕ್ರಿಕೆಟ್ ಒಳಗೊಂಡಂತೆ ಕ್ರೀಡಾ ಸಂಕೀರ್ಣ ನಿರ್ಮಿಸಲು 200 ಲಕ್ಷ ರೂ ಮೀಸಲಿರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!