ಪನಾಮ-ಕೊಲಂಬಿಯಾ ಗಡಿಯಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪನಾಮ-ಕೊಲಂಬಿಯಾ ಗಡಿಯಲ್ಲಿರುವ ಕೆರಿಬಿಯನ್ ಸಮುದ್ರದಲ್ಲಿ ಬುಧವಾರ ರಾತ್ರಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿಯತಕಾಲಿಕವಾಗಿ ಭೂಕಂಪಗಳು ಸಂಭವಿಸುತ್ತಿವೆ. ಅದೃಷ್ಟವಶಾತ್ ಹೆಚ್ಚಿನ ಭೂಕಂಪಗಳು ಹಾನಿ ಅಥವಾ ನಷ್ಟವನ್ನುಂಟು ಮಾಡುವುದಿಲ್ಲ. ಈ ವೇಳೆ ಕೆರಿಬಿಯನ್ ಸಮುದ್ರದಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪವಾಗಿದೆ.

ನಿನ್ನೆ ತಡರಾತ್ರಿ 03:05ಕ್ಕೆ ಕೊಲಂಬಿಯಾದ ಉತ್ತರಕ್ಕೆ 8.86 ಕಿ.ಮೀ ದೂರದಲ್ಲಿ, ಪಶ್ಚಿಮದಿಂದ 77.25 ಕಿಮೀ ದೂರದಲ್ಲಿ 40 ಕಿ.ಮೀ ಆಳದಲ್ಲಿ ಭೂಮಿ ನಡುಗಿದೆ. ಕೊಲಂಬಿಯಾ ಮೊಂಟೆರಿಯಾದಿಂದ 151 ಕಿಮೀ ದೂರದಲ್ಲಿ ಈ ಭೂಕಂಪನ ಸಂಭವಿಸಿದೆ.

ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!