ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಪೊಲೀಸರು ಜಹಾಂಗೀರ್‌ಪುರಿ ಪ್ರದೇಶದಲ್ಲಿ ಆರು ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದಾರೆ.
ಈ ವಲಸಿಗರು ತಮ್ಮ ಗುರುತನ್ನು ಮರೆಮಾಚಲು ತೃತೀಯ ಲಿಂಗಿ ಮಹಿಳೆಯರಂತೆ ವೇಷ ಧರಿಸುತ್ತಿದ್ದರು. ಸ್ಥಳೀಯ ತೃತೀಯಲಿಂಗಿ ಸಮುದಾಯದೊಂದಿಗೆ ಬೆರೆಯಲು ಮತ್ತು ತನ್ನ ನೋಟವನ್ನು ಬದಲಾಯಿಸಲು ಅವರು ಸಣ್ಣ ಶಸ್ತ್ರಚಿಕಿತ್ಸೆ ಮತ್ತು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ಬಾಂಗ್ಲಾದೇಶದಲ್ಲಿರುವ ತಮ್ಮ ಕುಟುಂಬಗಳೊಂದಿಗೆ ಸಂವಹನ ನಡೆಸಲು ಷೇಧಿತ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಆರು ವಲಸಿಗರನ್ನು ಗಡೀಪಾರು ಪ್ರಕ್ರಿಯೆಗಾಗಿ ಆರ್‌ಕೆ ಪುರಂನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ಹಸ್ತಾಂತರಿಸಲಾಗಿದೆ.
ಬಂಧಿತ ಬಾಂಗ್ಲಾದೇಶಿಗಳನ್ನು ಮೊಹಮ್ಮದ್ ಜಕಾರಿಯಾ ಮೊಯಿನಾ ಖಾನ್ (24), ಸುಹಾನಾ ಖಾನ್ (21), ಅಖಿ ಸರ್ಕಾರ್ (22), ಮೊಹಮ್ಮದ್ ಬಾವೊಯಿಜೆದ್ ಖಾನ್ (24), ಮೊಹಮ್ಮದ್ ರಾಣಾ ಅಲಿಯಾಸ್ ಲೋಬಾಲಿ (26) ಮತ್ತು ಜಾನಿ ಹುಸೇನ್ (20) ಎಂದು ಗುರುತಿಸಲಾಗಿದೆ. ಅವರು ಬಾಂಗ್ಲಾದೇಶದ ಬರ್ಗುನಾ, ಗಾಜಿಪುರ, ಮದರಿಪುರ, ಸಿರಾಜ್‌ಗಂಜ್, ಪಬ್ನಾ ಮತ್ತು ನೌಗಾಂವ್ ಜಿಲ್ಲೆಗಳ ಸ್ಥಳೀಯರು ಎಂದು ಪೊಲೀಸರು ತಿಳಿಸಿದ್ದಾರೆ.