ಮಹಿಳೆ ಹೊಟ್ಟೆಯಲ್ಲಿ ಶಿಶುವಿನಂತೆ ಇತ್ತು 6 ಕೆಜಿ ಗಡ್ಡೆ: ವೈದ್ಯರಿಂದ ಯಶಸ್ವಿ ಚಿಕಿತ್ಸೆ

ಹೊಸದಿಗಂತ ವರದಿ,ಬೀದರ್:

ಹೊಟ್ಟೆ ನೋವಿನಿಂದ ಬಳಲುತ್ತಿರುವ ಮಹಿಳೆಯ ಹೊಟ್ಟೆಯಲ್ಲಿ ನವಜಾತ ಶಿಶುವಿನ ಎರಡು ಪಟ್ಟಷ್ಟು ಗಾತ್ರದ ಗಡ್ಡೆ ಬೆಳೆದಿತ್ತು ಅದನ್ನು ಬೀದರ್‍ನ ಹಿಲಿಂಗ್ ಟ್ರೀ ಆಸ್ಪತ್ರೆಯ ವೈದ್ಯರು ಗುರುವಾರ ಯಶಸ್ವಿ ಆಪ್ರೇಶನ್ ಮೂಲಕ ಹೊರತೆಗೆದಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ಆಡಳಿತಾದಿಕಾರಿ ಸಿರಾಜೋದ್ದಿನ್ ಎಸ್‍ಕೆ ಅವರು ತಿಳಿಸಿದ್ದಾರೆ.

ಪಕ್ಕದ ತೆಲಂಗಾಣಾದ ಜಹಿರಾಬಾದನ 40 ವರ್ಷದ ಮಹಿಳೆಗೆ ಕಳೆದ 2 ವರ್ಷದಿಂದ ಹೊಟ್ಟೆನೋವು ಇತ್ತು ಅಲ್ಲದೆ ಹೊಟ್ಟೆ ಬಾವು ಬೆಳೆದಿದ್ದರಿಂದ ಅನೇಕ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿದ್ದರು ಕಡಿಮೆಯಾಗಿಲ್ಲ. ಹೀಗಾಗಿ ನವೆಂಬರ 17ರಂದು ಬೀದರ್ ನಗರದ ನೆಹರು ಕ್ರೀಡಾಂಗಣ ಬಳಿಯ ಹಿಲಿಂಗ್ ಟ್ರೀ ಮಲ್ಟಿ ಸೂಪರ ಸ್ಪೇಷಾಲಿಟಿ ಆಸ್ಪತ್ರೆ ಬಂದು ದಾಖಲಾಗಿದ್ದರು.

ಆಪ್ರೇಶನ್ ನಡೆಸಿದ ಮಹಿಳಾ ತಜ್ಞರಾದ ಡಾ. ಶಿವಲೀಲಾ ಏಕಲೂರೆ ಮಾತನಾಡಿ, ಮಹಿಳೆಯ ಗರ್ಭ ಚೀಲದ ಅಂಡಾಶಯದ ಬಳಿ 6 ಕೆಜಿಯ ಗಡ್ಡೆ ಬೆಳೆದು ಗರ್ಭವತಿ ಮಹಿಳೆಯಂತೆ ಮೇಲ್ನೋಟಕ್ಕೆ ಕಾಣುವಂತಿತ್ತು ಆದರೆ ಈ ಗಡ್ಡೆಯನ್ನು ಆಪ್ರೇಶನ್ ಮೂಲಕ ಹೊರ ತೆಗೆಯಲಾಗಿದ್ದು, ಶಸ ಚಿಕಿತ್ಸೆಯ ನಂತರ ಮಹಿಳೆ ಯಾವುದೇ ಸಮಸ್ಯೆ ಇಲ್ಲದೇ ಆರೋಗ್ಯ ಸ್ಥೀತಿ ಸಂಪೂಣವಾಗಿ ಸ್ಥಿರವಾಗಿದೆ.
ಯಶಸ್ವಿ ಆಪ್ರೇಶನ್ ನಡೆಸಿದಕ್ಕೆ ಮಹಿಳೆಯ ಪತಿ ಹಾಗೂ ಕುಟುಂಬಸ್ಥರು ವೈದ್ಯರ ಕಾರ್ಯವನ್ನು ಶ್ಲಾಸಿದ್ದಾರೆ ಎಂದು ತಿಳಿಸಿದ್ದಾರೆ.

ಡಾ. ಶಿವಲೀಲಾ ಅವರೊಂದಿಗೆ ಡಾ. ಇರ್ಷಾದ ನವೀದ್, ಡಾ. ಅಬ್ರಾರ್ ಖಾದ್ರಿ ಅಲ್ಲದೇ ಆಸ್ಪತ್ರೆಯ ಸಿಬ್ಬಂದಿಗಳಾದ ವಿಶೇಷವಾಗಿ ಆಪ್ರೇಶನ್ ತಂಡದ ಪುಟ್ಟರಾಜ, ಖುದ್ದುಸ್, ಕುಮಾರಿ ಅಂಕಿತಾ, ಶ್ರೀಮತಿ ಆರತಿ, ಕುಮಾರಿ ಸುಮನ ಮತ್ತು ಪೀಟರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಮ್ಮ ಆಸ್ಪತ್ರೆಗೆ ಈಗಾಗಲೇ ಸೋಲಾಪೂರ, ಹೈದ್ರಾಬಾದ್‍ನ ವಿಶೇಷ ತಜ್ಞರು ಕೂಡ ಭೇಟಿ ನೀಡುತಿದ್ದಾರೆ. ಹೀಗಾಗಿ ಆರೋಗ್ಯವಂತ ಜೀವನ  ನಡೆಸಲು ಮತ್ತು ಕಾಯಿಲೆ ಬಂದಾಗ ಸೂಕ್ತ ಸಲಹೆ, ಸೂಚನೆ ಮತ್ತು ಚಿಕಿತ್ಸೆ ಪಡೆಯಲು ಹಿಲೀಂಗ್ ಟ್ರೀ ಆಸ್ಪತ್ರೆಗೆ ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಮುಖ್ಯ ಆಡಳಿತಾದಿಕಾರಿ ಸಿರಾಜೋದ್ದಿನ ಎಸ್‍ಕೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!