ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಶಾಖಪಟ್ಟಣಂನಲ್ಲಿ 6 ಮಂದಿ ನಕ್ಸಲರನ್ನು ಹೊಡೆದುರುಳಿಸಿದ ಪೊಲೀಸ್​ ಪಡೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶಾಖಪಟ್ಟಣಂನಲ್ಲಿ ಇಂದು ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್ ಪೊಲೀಸ್​ ಪಡೆ ಹೊಡೆದುರುಳಿಸಿದೆ.
ಇಂದು ಬೆಳಗ್ಗೆಯಿಂದಲೂ ಮಾವೋವಾದಿಗಳು ಮತ್ತು ಪೊಲೀಸ್​ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಈ ಎನ್​ಕೌಂಟರ್​​ನಲ್ಲಿ ಆರು ಮಂದಿ ನಕ್ಸಲರನ್ನು ಗ್ರೇಹೌಂಡ್ಸ್​ ಪೊಲೀಸರು ಹತ್ಯೆಗೈದಿದ್ದಾರೆ ಎಂದು ವಿಶಾಖ ಗ್ರಾಮೀಣ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ.ಕೃಷ್ಣರಾವ್​ ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಾಂಪಾದಲ್ಲಿರುವ ಕೊಯಿರು ಸುತ್ತಲಿನ ಅರಣ್ಯಪ್ರದೇಶವಾದ ತೀಲಗಮೆಟ್ಟದಲ್ಲಿ ಆಯಂಟಿ ನಕ್ಸಲ್​ ವಿಶೇಷ ಪಡೆ ಗ್ರೇಹೌಂಡ್ಸ್​ ಪೊಲೀಸರು ಮತ್ತು ಸಿಪಿಐ (ಮಾವೋವಾದಿಗಳು) ಸಿಬ್ಬಂದಿ ನಡುವೆ ಗುಂಡಿನಚಕಮಕಿ ನಡೆದಿತ್ತು. ಆರು ಮಂದಿ ಮೃತಪಟ್ಟವರಲ್ಲಿ ಮಹಿಳಾ ನಕ್ಸಲರೂ ಸೇರಿದ್ದು, ಇವರಿಂದ ಒಂದು ಎಕೆ 47, ಮೂರು 303 ರೈಫಲ್ಸ್​, ಒಂದು ಎಸ್​ಎಲ್​ಆರ್​ ಸೇರಿ ಹಲವು ವಿಧದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೃಷ್ಣರಾವ್​ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss