spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಂಸತ್ ಕಲಾಪ ಅಡ್ಡಿ: 6 ಟಿಎಂಸಿ ಸದಸ್ಯರ ಅಮಾನತು!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಂಸತ್ ಕಲಾಪ ಆರಂಭವಾದಾಗಿನಿಂದಲೂ ಪೆಗಾಸಸ್ ಹಗರಣ, ಕೃಷಿ ಕಾಯ್ದೆಗೆ ವಿರೋಧ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದು, ಇಂದೂ ಕೂಡ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ-ಕೋಲಾಹಲವೆಬ್ಬಿಸಿದ 6 ಟಿಎಂಸಿ ಸದಸ್ಯರನ್ನು ಅಮಾನತುಗೊಳಿಸಿ ಸಭಾಪತಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದಾರೆ.
ಟಿಎಂಸಿ ಸದಸ್ಯ ಡೋಲಾ ಸೇನ್, ಅರ್ಪಿತಾ ಘೋಷ್, ನದೀಮ್ ಹಕ್, ಅಭಿರ್ ರಂಜನ್ ಬಿಸ್ವಾಸ್, ಶಾಂತಾ ಚೇತ್ರಿ ಹಾಗೂ ಮೌಸಮ್ ನೂರ್ ಅವರನ್ನು ಇಂದಿನ ಕಲಾಪದಿಂದ ಅಮಾನತುಗೊಳಿಸಲಾಗಿದೆ.
ಪೇಗಾಸಸ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹಿಸಿ ಟಿಎಂಸಿ ಸದಸ್ಯರು ಗಲಾಟೆ ಆರಂಭಿಸಿದ್ದರು. ಸದನದಲ್ಲಿ ಕೋಲಾಹಲ ಆರಂಭವಾದ ಹಿನ್ನೆಲೆಯಲ್ಲಿ ಕೆಲಕಾಲ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ಸದಸ್ಯರು ನಾಮಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಈ ಹಿನ್ನೆಲೆಯಲ್ಲಿ ನಿಯಮ 255ರ ಅಡಿಯಲ್ಲಿ ಸಂಸದರನ್ನು ಇಂದಿನ ಕಲಾಪದಿಂದ ಅಮಾನತುಗೊಳಿಸಿ ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss