60 ದಿನ, 300ಕ್ಕೂ ಅಧಿಕ ಬಗೆ ಪಾರಂಪರಿಕ ಆಹಾರ: ಗಮನಸೆಳೆದಿದೆ ‘ಅನ್ನಬ್ರಹ್ಮ ಚಾತುರ್ಮಾಸ್ಯ’!

ಹೊಸದಿಗಂತ ಡಿಜಿಟಲ್ ಡೆಸ್ಕ್: ಗೋಕರ್ಣದ ಅಶೋಕೆಯಲ್ಲಿರುವ ಶ್ರೀ ರಾಮಚಂದ್ರಾಪುರದ ಮೂಲಮಠದಲ್ಲಿ ನಡೆಯುತ್ತಿರುವ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಹಲವು ವಿಶಿಷ್ಟತೆಗಳಿಂದ ಗಮನಸೆಳೆಯುತ್ತಿದೆ. ಈ ಬಾರಿಯ ಚಾತುರ್ಮಾಸ್ಯದಲ್ಲಿ ಆಹಾರ, ಆಹಾರ ಪದ್ಧತಿಯ ಜಾಗೃತಿ ಪ್ರಮುಖ ಅಂಶವಾಗಿದ್ದು, ಇಲ್ಲಿ 60 ದಿನಗಳಲ್ಲಿ ವೈವಿಧ್ಯಮಯ ಪಾರಂಪರಿಕ ಪಾಕ ಲೋಕದ ಅನಾವರಣವಾಗಲಿದೆ. 300ಕ್ಕೂ ಅಧಿಕ ವಿಶೇಷ ಸಾತ್ವಿಕ ಆಹಾರಗಳನ್ನು ಚಾತುರ್ಮಾಸ್ಯದಲ್ಲಿ ಆಗಮಿಸುವವರಿಗೆ ಉಣಬಡಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಮಲೆನಾಡು ಹಾಗೂ ಕರಾವಳಿಯ ಪಾರಂಪರಿಕ ಭಕ್ಷ್ಯಗಳನ್ನು ಮಠದ ಮಾತೃವಿಭಾದ ನೇತೃತ್ವದಲ್ಲಿ ತಯಾರಿಸುವ … Continue reading 60 ದಿನ, 300ಕ್ಕೂ ಅಧಿಕ ಬಗೆ ಪಾರಂಪರಿಕ ಆಹಾರ: ಗಮನಸೆಳೆದಿದೆ ‘ಅನ್ನಬ್ರಹ್ಮ ಚಾತುರ್ಮಾಸ್ಯ’!