Tuesday, August 16, 2022

Latest Posts

ಹುಬ್ಬಳ್ಳಿಯಲ್ಲಿ 82 ವಾರ್ಡ್ ಪೈಕಿ 60 ವಾರ್ಡ್ ಗೆಲ್ಲುತ್ತೇವೆ: ಮಾಜಿ ಸಿಎಂ ಜಗದೀಶ ಶೆಟ್ಟರ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಹುಬ್ಬಳ್ಳಿ:

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದಿಂದ ಜಯಗಳಿಸುತ್ತವೆ. ಮತಯಾಚನೆಯಲ್ಲಿ ತೊಡಗಿದಾಗ ಸಾರ್ವಜನಿಕರು ಪಕ್ಷದ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ 82 ವಾಡ್೯ ಗಳ ಪೈಕಿ 60 ವಾಡ್೯ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿಯ 43 ವಾಡ್೯ ಬೆಂಗೇರಿಯ ವಿನಾಯಕ ಕಾಲೂನಿಯಲ್ಲಿ ದೇವಕಿ ಆಂಗ್ಲ ಮಾಧ್ಯಮ ಶಾಲೆ ಕುಟುಂಬದ ಸಮೇತ ಮತದಾನ ಮಾಡಿ ಮಾತನಾಡಿದರು. ಬಿಜೆಪಿ ಪಕ್ಷದವರೆ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳುತ್ತಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಲಿಕೆ ಚುನಾವಣೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿತ್ತು.700ಕ್ಕೂ ಹೆಚ್ಚು ಪಕ್ಷದಿಂದ ಅರ್ಜಿ ಸಲ್ಲಿಸಿದ್ದರು. ಪ್ರತಿಯೊಂದು ವಾಡ್೯ 10-15 ಆಕಾಂಕ್ಷಿಗಳಿದ್ದರು. ನಿರಾಸೆಯಾದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂಥಹ ವಾಡ್೯ಗಳಲ್ಲಿ ಈ ರೀತಿ ಯಾಗುವುದು ಸಹಜ ಆದರೆ ಇದರಿಂದ ಯಾವುದೇ ರೀತಿ ಪರಿಣಾಮ ಬೀಳುವುದಿಲ್ಲ ಎಂದರು.
ಬಂಡಾಯ ಅಭ್ಯರ್ಥಿಗಳು ಜಯಗಳಿಸಿದರೆ ನಿಮ್ಮ ಪಕ್ಷದಲ್ಲಿ ಸೇರಿಸಿಕೊಳ್ಳುತ್ತಿರಾ ಎಂಬ ಪ್ರಶ್ನೆಗೆ ಅವರು ಯಾರು ಗೆಲ್ಲುವುದಿಲ್ಲ ಅಲ್ಲಿಯು ಸಹ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಹೇಳಿದರು.
ಬೆಲೆ ಏರಿಕೆ ಬೇರೆ ಪಕ್ಷವಿದ್ದಾಗಲೂ ಇತ್ತು ಆದರಿಂದ ಯಾವುದೇ ರೀತಿ ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss