Sunday, September 25, 2022

Latest Posts

‘ಬಾಳೋ ಪಾಟ್‌ರ ಬಂಬಂಗ’ ಕೌಟುಂಬಿಕ ಸ್ಪರ್ಧೆಗೆ 62 ಒಕ್ಕಗಳ ನೋಂದಣಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊಡವಾಮೆರ ಕೊಂಡಾಟ(ರಿ) ಸಂಘಟನೆಯು ಇದೇ ಪ್ರಥಮ ಬಾರಿಗೆ ಆಯೋಜಿಸಿರುವ ಕೊಡವ ಅಂತರ್ ಕುಟುಂಬಗಳ ನಡುವಿನ ಬಾಳೋ ಪಾಟ್ ಸ್ಪರ್ಧೆಗೆ ಒಟ್ಟು 62 ಒಕ್ಕಗಳು ನೋಂದಣಿ ಮಾಡುವುದರ ಮೂಲಕ, ಕೊಡವ ಜಾನಪದ ಇತಿಹಾಸದ ಮೂಲ ಬೇರಾದ ಬಾಳೋ ಪಾಟ್‌ನ ಪುನರುತ್ಥಾನಕ್ಕೆ ಕೈಜೋಡಿಸಿವೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕರೂ ಆಗಿರುವ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ತಿಳಿಸಿದ್ದಾರೆ.

ಕೊಡವಾಮೆರ ಕೊಂಡಾಟ ಸಂಘಟನೆಯು ‘ಅವ್ವಪಾಜೆರ ಉಳಿಕೆ ಬೊಳ್ಚೆಕಾಯಿತ್’ ಎಂಬ ಧ್ಯೇಯದೊಂದಿಗೆ ಉದಯವಾಗಿ, ಕೇವಲ ಎರಡು ವರ್ಷಗಳನ್ನು ಪೂರೈಸುತ್ತಿರುವ ಈ ಅವಧಿಯಲ್ಲಿ ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಂಘಟನೆಯು ಆಯೋಜಿಸಿದ್ದು, ಇದೀಗ ಕೊಡವ ಇತಿಹಾಸದ ಮೂಲ ಬೇರಾಗಿರುವ ಹಾಗೂ ಸೃಷ್ಟಿಯ ಮೂಲದ ಉಲ್ಲೇಖವಿರುವ ಬಾಳೋಪಾಟ್ ಪ್ರತೀ ಕೊಡವ ಸದಸ್ಯನಿಗೂ ಅರಿವಿರಬೇಕು, ಹಾಗೂ ಮುಂದಿನ ಪೀಳಿಗೆಗೆ ಇದನ್ನ ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಈ ಕೌಟುಂಬಿಕ ಬಾಳೋ ಪಾಟ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರಾರಂಬಿಕ ವರ್ಷವಾದ್ದರಿಂದ ಕೇವಲ ಎಂಟರಿಂದ ಹತ್ತು ತಂಡಗಳ ನಿರೀಕ್ಷೆ ಮಾಡಲಾಗಿತ್ತು ಆದರೆ 62ತಂಡಗಳ ನೊಂದಣಿಯಿಂದ ಕೊಡವ ಜಾನಪದ ಸಂಸ್ಕೃತಿ ಬಡವಾಗಿಲ್ಲ, ಇನ್ನೂ ಕೂಡ ಸಮೃದ್ದವಾಗಿದೆ ಎನ್ನುವುದನ್ನ ಸಾರಿದಂತಾಗಿದೆ ಎಂದು ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.

ಬಾಳೋಪಾಟ್‌ರ ಬಂಬಂಗ ಸ್ಪರ್ದೆಗೆ, ಮೊಣ್ಣಂಡ(ಹಮ್ಮಿಯಾಲ), ಮೋರ್ಕಂಡ (ಶಿರಂಗಳ್ಳಿ), ನಾಪಂಡ(ಶಿರಂಗಳ್ಳಿ), ಮೇದುರ(ಮಂಕ್ಯ), ಪೋಡಮಾಡ(ಬಾಳಲೆ), ಕಾಣತಂಡ(ಕದನೂರ್), ಮಾಳೇಟಿರ(ಕುಂದತ್), ಉಡುವೆರ(ಶಿರಂಗಳ್ಳಿ), ಪುದಿಯತಂಡ(ಮುಟ್ಲು), ಚೋಕಿರ(ಬೇತ್), ನಾಪಂಡ(ಸೂರ್ಲಬ್ಬಿ), ಅಯ್ಯಲಪಂಡ(ಕಾಲೂರು), ಚೆಟ್ಟಿಯಾರಂಡ (ನೆಲಜಿ), ಮಡ್ಲಂಡ(ಮೇಘತಾಳ್), ಕಂಗಾಂಡ(ನಾಪೋಕ್ಲು), ಬೊಟ್ಟೋಳಂಡ(ಪೇರೂರ್), ಚೇನಂಡ(ಕೋಕೇರಿ), ಕನ್ನಿಗಂಡ(ಕುಂಬಾರಗಡಿಗೆ), ನಂದಿರ(ಮುಕ್ಕೋಡ್ಲು), ಮಂದೆಯಂಡ(ಶಿರಂಗಳ್ಳಿ), ಮಣವಟ್ಟಿರ(ನೆಲ್ಜಿ), ತಂಬುಕುತ್ತಿರ(ಹಮ್ಮಿಯಾಲ), ಅಣ್ಣಾಳಮಾಡ(ಬಿರುನಾಣಿ), ಕುಟ್ಟಿಮಾಡ(ನಾಲ್ಕೇರಿ), ಕಾಳಿಮಾಡ(ಬಿರುನಾಣಿ), ನೆಲ್ಲೀರ(ಬಿರುನಾಣಿ), ಕರ್ತಮಾಡ(ಬಿರುನಾಣಿ), ತೀತಿಮಾಡ(ಬಿಶೆಟ್ಟಿಗೇರಿ), ಚೊಟ್ಟೆಮಂಡ(ನಾಂಗಾಲ), ಕಾಳಚಂಡ(ಮುಕ್ಕೋಡ್ಲು), ಸರ್ಕಂಡ(ಶಿರಂಗಳ್ಳಿ), ಚಾಮೆರ(ಮಂಕ್ಯ), ಮೇವಡ(ಕಾಕೋಟ್‌ಪರಂಬು), ನಾಪಂಡ(ಅವಂಡಿ), ಕುಂಬೇರ(ಬೊಳ್ಳ್’ಮಾಡ್), ಪಾಡೆಯಂಡ(ಕೈಕಾಡ್), ಸಿದ್ದಂಡ(ಕಾಲೂರ್), ಐಚಂಡ(ದೇವಣಗೇರಿ), ಅಪ್ಪಂಡೇರಂಡ(ಮರೋಡಿ), ನಂಬುಡಮಾಡ(ಮರೋಡಿ), ಮುಲ್ಲೇಂಗಡ(ಮರೋಡಿ), ಚಂದುರ(ಮರೋಡಿ), ಕನ್ನಿಗಂಡ(ಹಮ್ಮಿಯಾಲ), ಕೊಚ್ಚೆರ(ಹಮ್ಮಿಯಾಲ), ಕಾಕೆರ(ಹಮ್ಮಿಯಾಲ), ಚೆನ್ನಪಂಡ(ಕಾಲೂರು), ಐಮುಡಿಯಂಡ(ಗರ್ವಾಲೆ), ಕೇಲೇಟಿರ(ನಾಪೋಕ್ಲ್), ಉದಿಯಂಡ(ಮುಟ್ಲು), ಕೂಪದಿರ(ಬೆಟ್ಟತೂರು), ಕುಂಡ್ಯೊಳಂಡ(ಕೊಳಕೇರಿ), ಕಂಬಂಡ(ಬೇಟೋಳಿ), ಅಪ್ಪಚ್ಚಿರ(ಪೇರೂರ್), ಅಪ್ಪನೆರವಂಡ(ಕಿರ್‌ಂದಾಡ್), ಓಡಿಯಂಡ(ಮುಟ್ಲು), ನಾಗಚೆಟ್ಟಿರ(ಅಂದಗೋವೆ), ದಾಸಂಡ(ಅಂದಗೋವೆ), ಮೊಳ್ಳೆರ(ಅಂದಗೋವೆ), ಚೀಕಂಡ(ಅಂದಗೋವೆ), ಕೇಚಿರ(ಅಂದಗೋವೆ), ಕುಂಚೆಟ್ಟಿರ(ಚೇರಂಬಾಣೆ), ಪಳೆಯಂಡ (ಹಮ್ಮಿಯಾಲ) ಕುಟುಂಬಗಳು ಹೆಸರು ನೋಂದಾಯಿಸಿಕೊಂಡಿವೆ.

ನೋಂದಾಯಿತ ತಂಡಗಳು ಅಗಸ್ಟ್ 31ರ ಒಳಗಾಗಿ ಸಾಂಪ್ರದಾಯಿಕ ಕುಪ್ಯಚಾಲೆ ಧರಿಸಿ, ದುಡಿಸಹಿತ 30 ನಿಮಿಷ ಮೀರದಂತೆ, ತಮಗೆ ತಿಳಿದಿರುವ ದೇಶಕೆಟ್ಟ್ (ಪಟ್ಟೋಲೆಪಳಮೆಯಲ್ಲಿ ಇರುವುದಷ್ಟೇ ಅಲ್ಲ) ಪಾಟನ್ನು ಹಾಡಿ ವೀಡೀಯೋ ರೆಕಾರ್ಡ್ ಮಾಡಿ ಪೈಪೋಟಿ ಸಂಚಾಲಕ ಕುಂಞೀರ ಗಿರೀಶ್‌ಬೀಮಯ್ಯ ಅವರ 9483534481 ಸಂಖ್ಯೆಗೆ ವಾಟ್ಸಾಪ್, ಮತ್ತು [email protected] ಗೆ ಈ ಮೈಲ್ ಮೂಲಕ ಕಳುಹಿಸಬೇಕು. ವೀಡಿಯೋದ ಆರಂಭದಲ್ಲಿ ತಮ್ಮ ಒಕ್ಕ ಹೆಸರು ಹಾಗೂ ಭಾಗವಹಿಸುವ ನಾಲ್ವರು ಸದಸ್ಯರ ಹೆಸರನ್ನು ಕಡ್ಡಾಯವಾಗಿ ಹೇಳಬೇಕು. ದೇಶಕೆಟ್ಟ್ ಪಾಟಿನ ವಿಷಯ, ಹಾಡಿನ ರಾಗ, ಶೈಲಿ, ದುಡಿಕೊಟ್ಟ್ ಸಾಮ್ಯತೆ, ಶಿಸ್ತು, ಸ್ಪರ್ಧೆಯ ಸಮಯ ಪಾಲನೆಗಳನ್ನು ಪರಿಗಣಿಸಿ ಒಟ್ಟು 30 ಅಂಕಗಳಿಗೆ ತೀರ್ಪುನೀಡಲಾಗುತ್ತದೆ. 35 ನಾಡುಗಳಲ್ಲಿ 03 ತಲೆನಾಡುಗಳಾದ ಮೇಂದಲೆ, ಕ್‌ಗ್ಗಟ್ಟ್, ಏಳ್‌ನಾಡ್ ಗಳಿಂದ ತಲಾ ಒಬ್ಬರಂತೆ ಮೂವರು ತೀರ್ಪುಗಾರರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ವೀಡಿಯೋ ವೀಕ್ಷಿಸುವುದರೊಂದಿಗೆ ತೀರ್ಪು ನೀಡಲಿದ್ದಾರೆ. ತೀರ್ಪುಗಾರಿಕೆಯನ್ನು ಸಾರ್ವಜನಿಕರು ಸಾಮಾಜಿಕಮಾದ್ಯಮದ ಮೂಲಕ ಲೈವ್ ವೀಕ್ಷಣೆಮಾಡುವ ವ್ಯವಸ್ತೆಯನ್ನು ಕಲ್ಪಿಸಲಾಗುವುದೆಂದು ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ಹಾಗೂ ಸದಸ್ಯರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!