Monday, August 15, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ 640 ಮಂದಿಗೆ ಕೊರೋನಾ, 555 ಜನರು ಗುಣಮುಖ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ,ಕಾಸರಗೋಡು:

ಜಿಲ್ಲೆಯಲ್ಲಿ ಭಾನುವಾರ 640 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ಪೈಕಿ 635 ಜನರಿಗೆ ಸಂಪರ್ಕದ ಮೂಲಕ ವೈರಸ್ ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 555 ಮಂದಿ ಸೋಂಕುಮುಕ್ತರಾದರು. ಇದೇ ವೇಳೆ ಕೇರಳದಲ್ಲಿ ಹೊಸದಾಗಿ 12,220 ಜನರಿಗೆ ಕೊರೋನಾ ವೈರಸ್ ದೃಢಗೊಂಡಿದೆ. ಇದರಲ್ಲಿ 11,497 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ರಾಜ್ಯದಲ್ಲಿ 12,502 ಜನರು ಗುಣಮುಖರಾದರು.
ಕೇರಳ ರಾಜ್ಯದ ಜಿಲ್ಲೆಗಳ ಪೈಕಿ ಮಲಪ್ಪುರಂ ಜಿಲ್ಲೆಯಲ್ಲಿ 1861, ಕಲ್ಲಿಕೋಟೆ 1428, ತೃಶೂರು 1307, ಎರ್ನಾಕುಳಂ 1128, ಕೊಲ್ಲಂ 1012, ತಿರುವನಂತಪುರ 1009, ಪಾಲಕ್ಕಾಡು 909, ಕಣ್ಣೂರು 792, ಕಾಸರಗೋಡು 640, ಕೋಟ್ಟಾಯಂ 609, ಆಲಪ್ಪುಳ 507, ವಯನಾಡು 397, ಪತ್ತನಂತ್ತಿಟ್ಟ 299, ಇಡುಕ್ಕಿ ಜಿಲ್ಲೆಯಲ್ಲಿ 242 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಈ ಮಧ್ಯೆ ಕೇರಳದಲ್ಲಿ ಭಾನುವಾರ ಕೊರೋನಾ ಸೋಂಕು ಬಾಧಿಸಿ 97 ಮಂದಿ ಅಸುನೀಗಿದರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 14,586 ಜನರು ಮರಣ ಹೊಂದಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss