ಬಳ್ಳಾರಿ: ಭವ್ಯ ಪರಂಪರೆ ಹಾಗೂ ಇತಿಹಾಸ ಹೊಂದಿರುವ ಈ ನಮ್ಮ ನಾಡಿಗೆ ನಮ್ಮ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಆನಂದಸಿಂಗ್ ಅವರು ಹೇಳಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ನಿಮಿತ್ತ ಭಾನುವಾರ ಜಿಲ್ಲಾಡಳಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.
ಎಂದು ಮರೆಯದ ಸಾಮ್ರಾಜ್ಯವಾಗಿ ಭಾರತದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಮಾಡಿ ವಿಶ್ವ ಪಾರಂಪರಿಕ ತಾಣವಾದ ವಿಜಯನಗರ ಸಾಮ್ರಾಜ್ಯದ ಹಂಪಿ ನಮ್ಮ ಜಿಲ್ಲೆಯದು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯವಾಗಿದೆ ಎಂದು ಬಳ್ಳಾರಿ ಜಿಲ್ಲೆ ಬಗೆಗಿನ ತಮ್ಮ ಅಭಿಮಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಕರ್ನಾಟಕವೆಂಬುದು ಕೇವಲ ಒಂದು ಭೂಪ್ರದೇಶಕಷ್ಟೇ ಸೀಮಿತವಾಗಿಲ್ಲ. ಕರ್ನಾಟಕವೆಂದರೇ ಒಂದು ಸಂಸ್ಕøತಿ’, ‘ಒಂದು ಜನಸಮುದಾಯ”, ಇದೊಂದು ಭವ್ಯ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಸುಧೀರ್ಘ ಇತಿಹಾಸವಾಗಿದೆ. ಕನ್ನಡನಾಡು ವಿವಿಧ ಮತ, ಪಂಥ, ಧರ್ಮಗಳ ಸಂಗಮವಾಗಿದೆ ಎಂದರು.
ಭವ್ಯ ಸಾಂಸ್ಕøತಿಕ ಪರಂಪರೆಯನ್ನು ಹೊಂದಿರುವ ಸಾಮರಸ್ಯವೇ ಈ ನಾಡಿನ ಜೀವಾಳವಾಗಿರುವ ಪುರಾವೆಗಳು ಈ ನಾಡಿನ ಇತಿಹಾಸ ಉದ್ದಕ್ಕೂ ಸಾಕಾಷ್ಟು ಸಿಗುತ್ತವೆ, ಸರ್ವ ಧರ್ಮ ಸಹಿಷ್ಣುತೆ, ಸತ್ಯಾರಾಧನೆ, ಧರ್ಮನೀತಿ,ಸಮಬಾಳ್ವೆ, ಸೌರ್ಹಾದತೆ, ಹಾಗೂ ಭಾವಕ್ಕೆತೆಯ ದಿವ್ಯಸ್ವರ್ಗ ಈ ನಾಡು ಈ ನಾಡಿನಲ್ಲಿ ಸಾಹಿತಿಗಳು, ಕವಿಗಳು, ಶಿಲ್ಪಿಗಳು, ಕಲಾವಿದರು, ಸಂಶೋಧಕರು ಹಾಗೂ ಇತಿಹಾಸಕಾರರು ತಮ್ಮದೇ ಶೈಲಿಯಲ್ಲಿ ಸಾಧನೆ ಮಾಡಿ ಕರ್ನಾಟಕ ಮಾತೆ ಭುವನೇಶ್ವರಿಯ ಕಿರ್ತಿ ಕಳಸಕ್ಕೆ ಗರಿಗಳಾಗಿದ್ದಾರೆ. ಇದಕ್ಕೆ ಮುಕುಟ ಪ್ರಾಯವೆಂಬಂತೆ ದೇಶದಲ್ಲೆ ಹೆಚ್ಚು ಅಂದರೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಈ ನಮ್ಮ ಕನ್ನಡಕ್ಕೆ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಖನಿಜ ನಿಕ್ಷೇಪಗಳನ್ನು ಹೊಂದಿರುವ ಜಿಲ್ಲೆ ನಮ್ಮ ಬಳ್ಳಾರಿ ಜಿಲ್ಲೆ. ಈ ಜಿಲ್ಲೆಯ ಭೌತಿಕ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಸವಾರ್ಂಗಿಣ ಅಭಿವೃದ್ಧಿಗೆ ನಾವೆಲ್ಲರು ಶ್ರಮಿಸಲು ಕಂಕಣ ಬದ್ದರಾಗೋಣ. ಈ ಮೂಲಕ ನಾಡನ್ನು ಶ್ರೀಮಂತಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಕ್ಷೇತ್ರದ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಶಾಸಕರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಜಿಪಂ ಸಿಇಒ ನಂದಿನಿ ಕೆ.ಆರ್, ಡಿಎಫ್ಇ ಸಿದ್ರಾಮಪ್ಪ ಚಳಕಾಪುರೆ,ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.
ಬಸವರಾಜ ನಿರೂಪಿಸಿದರು. ಪ್ರೋಬೇಷನರಿ ಐಎಎಸ್ ರಾಹುಲ್ ಸಂಕನೂರು ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್ ಸ್ವಾಗತಿಸಿದರು