ರಾಮನಗರ :66 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಭವಿಷ್ಯಕ್ಕಾಗಿ ರಣಹದ್ದುಗಳು ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ಕಾರ್ಯಕ್ರಮ ಆಚರಿಸಲಾಗುತ್ತಿದು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಚಿಕ್ಕಮಗಳೂರಿನ ಮುತ್ತೋಡಿ ಇಂದ ಆರಂಭಗೊoಡ ಸೈಕಲ್ ಜಾಥಾವನ್ನು ಕಾವೇರಿ ವನ್ಯಜೀವಿ ವಿಭಾಗದಿಂದ ಮುತ್ತತ್ತಿ ಮಾರ್ಗದ ಭೂಹಳ್ಳಿ ಚೆಕ್ ಪೋಸ್ಟ್ ಬಳಿ ಸ್ವಾಗತಿಸಲಾಯಿತು.
ಕಾಡಿನಲ್ಲಿ ಆನೆ ಚಲನ ವಲನ( ಸೇವ್ ಎಲಿಪೆಂಟ್ ಕಾರಿಡಾರ್) ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಐಸಾರ್ ಕಂಪನಿ ನೇತೃತ್ವದಲ್ಲಿ ಬೆಂಗಳೂರಿನ ಬಿ ಇ ಎಲ್ ಕಂಪನಿ ನೌಕರರು, ನಿವೃತ್ತ ಯೋಧರು, ವನ್ಯಜೀವಿ ಪ್ರೇಮಿಗಳು ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದು ನಾಗರಹೊಳೆ ಮಾರ್ಗವಾಗಿ ರಾಮನಗರ ಪ್ರಾದೇಶಿಕ ವಲಯ ಸಾತನೂರು ಮಾರ್ಗವಾಗಿ ಬನ್ನೇರುಘಟ್ಟ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ ಸೇರಲಿದೆ, ನಂತರ ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆಯುವ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕನಕಪುರ ಉಪ ವಿಭಾಗದ ಎ,ಸಿ.ಎಪ್ ಅಂಕರಾಜು ತಿಳಿಸಿದರು, ಚಾಮರಾಜನಗರ ವಿಭಾಗದ ಸಿ.ಸಿ.ಎಫ್.ಮನೋಜ್ ಕುಮಾರ್, ಡಿ.ಸಿ.ಎಪ್.ರಮೇಶ್, ಅರಣ್ಯ ಅಧಿಕಾರಿಗಳಾದ ಮುತ್ತು ಸ್ವಾಮಿ ನಾಯಕ್, ರಾಜು, ಕಾವೇರಿ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಟಿ.ಸಿ. ವೆಂಕಟೇಶ್ ಹಾಗೂ ಅರಣ್ಯ ಸಿಬ್ಬಂದಿಗಳಾದ ರಿಜ್ವಾನ್, ಕಾಂತರಾಜು, ನಿಂಗಪ್ಪ, ರವಿ, ಗೋಪಾಲ್ ಭಾಗವಹಿಸಿದ್ದರು