Friday, July 1, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಇಂದು 676 ಮಂದಿಗೆ ಕೊರೋನಾ ಪಾಸಿಟಿವ್

ಹೊಸದಿಗಂತ ವರದಿ, ಕಾಸರಗೋಡು:

ಜಿಲ್ಲೆಯಲ್ಲಿ ಸೋಮವಾರ 676 ಮಂದಿಗೆ ಕೋವಿಡ್ ವೈರಸ್ ದೃಢಗೊಂಡಿದೆ. ಈ ಪೈಕಿ 620 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 178 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 13,644 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದರಲ್ಲಿ 12,550 ಮಂದಿಗೆ ಸಂಪರ್ಕದ ಮೂಲಕ ವೈರಸ್ ತಗಲಿದೆ. ರಾಜ್ಯದಲ್ಲಿ 4305 ಜನರು ಗುಣಮುಖರಾದರು.
ಕಲ್ಲಿಕೋಟೆ ಜಿಲ್ಲೆಯಲ್ಲಿ 2022, ಎರ್ನಾಕುಳಂ 1781, ಮಲಪ್ಪುರಂ 1661, ತೃಶೂರು 1388, ಕಣ್ಣೂರು 1175, ತಿರುವನಂತಪುರ 981, ಕೋಟ್ಟಾಯಂ 973, ಆಲಪ್ಪುಳ 704, ಕಾಸರಗೋಡು 676, ಪಾಲಕ್ಕಾಡು 581, ಇಡುಕ್ಕಿ 469, ಕೊಲ್ಲಂ 455, ಪತ್ತನಂತ್ತಿಟ್ಟ 390, ವಯನಾಡು ಜಿಲ್ಲೆಯಲ್ಲಿ 388 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮಧ್ಯೆ ಕೊರೋನಾ ವೈರಸ್ ಬಾಧಿಸಿ ಕೇರಳದಲ್ಲಿ ಸೋಮವಾರ 21 ಮಂದಿ ಮೃತಪಟ್ಟರು. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಒಟ್ಟು 4950 ಜನರು ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss