7 ಕಿಮೀ ನಡೆದುಕೊಂಡು ಹೋದ ಗರ್ಭಿಣಿ: ಬಿಸಿಲಿನ ತಾಪಕ್ಕೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್ಸಿ)ಕ್ಕೆ ಹೋಗಿ ಮನೆಗೆ ಹಿಂದಿರುಗಲು ಗ್ರಾಮದಿಂದ 7 ಕಿಮೀ ನಡೆದುಕೊಂಡು (Walk) ಬರುತ್ತಿದ್ದ ಗರ್ಭಿಣಿಯೊಬ್ಬಳು (Pregnant) ಸೂರ್ಯನ ಶಾಖಕ್ಕೆ (Heat Stroke) ಸಾವನ್ನಪ್ಪಿದ ಘಟನೆ ನಡೆದಿದೆ.

ದಹಾನು ತಾಲೂಕಿನ ಓಸರ್ ವೀರ ಗ್ರಾಮದ ಸೋನಾಲಿ ವಾಘಾಟ್ ಸಾವನ್ನಪ್ಪಿದ ಮಹಿಳೆ. ಈಕೆ 3.5 ಕಿ.ಮೀ ನಡೆದು ಅಲ್ಲಿಂದ ಆಟೋದಲ್ಲಿ ಪ್ರಾಥಮಿಕ ಕೇಂದ್ರಕ್ಕೆ ತೆರಳಿದ್ದಾಳೆ.

9ನೇ ತಿಂಗಳಿನಲ್ಲಿದ್ದ ಮಹಿಳೆಗೆ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಆಕೆ ಬಿಸಿಲಿನಲ್ಲಿ 3.5 ಕಿಮೀ ಪುನಃ ನಡೆದುಕೊಂಡು ಬಂದಿದ್ದಾಳೆ. ಬಳಿಕ ಸಂಜೆಯ ನಂತರ ಸೋನಾಲಿಗೆ ಅನಾರೋಗ್ಯ ಕಾಡಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬಿಸಿಲಿನ ಶಾಖದಿಂದಾಗಿ ಆಕೆಗೆ ಅನಾರೋಗ್ಯ ಉಂಟಾಗಿದೆ ಎಂದು ದೃಢಪಡಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಜೊತೆಗೆ ಹೊಟ್ಟೆಯಲ್ಲಿರುವ ಮಗುವು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!