ಗಾಂಧಿನಗರದಲ್ಲಿ ಸಿನಿಮಾ ಭರಾಟೆ: ಒಂದೇ ದಿನ ಏಳು ಕನ್ನಡ ಸಿನಿಮಾ ರಿಲೀಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗಾಂಧಿನಗರದಲ್ಲಿ ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ ಗಳಲ್ಲಿ ಶೇ. 100ರಷ್ಟು ಪ್ರವೇಶಾತಿಗೆ ಅನುಮತಿ ಸಿಕ್ಕಿದ ನಂತರ ಈಗ ಎಲ್ಲಾ ಚಿತ್ರಗಳು ರಿಲೀಸ್‌ ಗೆ ಸಜ್ಜಾಗಿದೆ.
ಈ ವಾರ ಸ್ಯಾಂಡಲ್‌ ವುಡ್‌ ನ ಏಳು ಸಿನಿಮಾಗಳು ತೆರೆ ಮೇಲೆ ಬರಲಿದ್ದು, ಸಿನಿ ಪ್ರೇಮಿಗಳಿಗೆ ಸಾಲು ಸಾಲು ಚಿತ್ರ ವೀಕ್ಷಿಸಲು ಅವಕಾಶವಿದೆ.
ಫೆ.11 ಕ್ಕೆ ಬಹು ನಿರೀಕ್ಷಿತ ಚಿತ್ರ ಲವ್‌ ಮಾಕ್ಟೇಲ್-2‌, ಫೋರ್‌ ವಾಲ್ಸ್‌, ಮಹಾರೌದ್ರಂ, ರೌಡಿ ಬೇಬಿ, ಪ್ರೀತಿಗಿಬ್ಬರು, ಒಪ್ಪಂದ, ಇದೇ ಅಂತರಂಗ ಶುದ್ದಿ ಸೇರಿದಂತೆ ಏಳು ಕನ್ನಡ ಚಿತ್ರಗಳು ತೆರೆ ಮೇಲೆ ಬರಲಿದೆ.
ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪನ ವಿಕ್ರಾಂತ್ ರೋಣ, ಪುನೀತ್‌ ರಾಜ್‌ ಕುಮಾರ್‌ ನಟನೆಯ ಜೇಮ್ಸ್‌ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!