ಅಮೆರಿಕದಲ್ಲಿ ಮತ್ತರೆಡು ಗುಂಡಿನ ದಾಳಿ: ಪ್ರತ್ಯೇಕ ಘಟನೆಗಳಲ್ಲಿ ಏಳು ಮಂದಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕ್ಯಾಲಿಫೋರ್ನಿಯಾದ ಹಾಫ್ ಮೂನ್ ಬೇನಲ್ಲಿ ಸೋಮವಾರ ನಡೆದ ಎರಡು ಗುಂಡಿನ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಯುಎಸ್ ಮಾಧ್ಯಮ ವರದಿ ಮಾಡಿದೆ. ಹೆದ್ದಾರಿ 92 ಮತ್ತು ಹಾಫ್ ಮೂನ್ ಬೇ ಸಿಟಿ ಮಿತಿಯಲ್ಲಿ ದುರ್ಘಟನೆ ನಡೆದಿದೆ.

ದಾಳಿ ನಡೆಸಿದ ಆರೋಪಿ ಸೆರೆಯಾಗಿದ್ದು, ಮೌಂಟೇನ್ ಮಶ್ರೂಮ್ ಫಾರ್ಮ್‌ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ABC7 ವರದಿ ಮಾಡಿದೆ,  ಸಮೀಪದ ರೈಸ್ ಟಕಿಂಗ್-ಸಾಯಿಲ್ ಫಾರ್ಮ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪ್ರಸಾರಕರು ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ಲಾಸ್ ಏಂಜಲೀಸ್ ಬಳಿಯ ಡ್ಯಾನ್ಸ್ ಸ್ಟುಡಿಯೋದಲ್ಲಿ ಬಂದೂಕುಧಾರಿಯೊಬ್ಬ 11 ಜನರನ್ನು ಕೊಂದ 48 ಗಂಟೆಗಳ ನಂತರ ಹೊಸ ರಕ್ತಪಾತ ಸಂಭವಿಸಿದೆ.

ಆ ಹತ್ಯಾಕಾಂಡ ನಡೆದ ಮಾಂಟೆರಿ ಪಾರ್ಕ್‌ನಲ್ಲಿದ್ದ ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್, “ದುರಂತದ ಮೇಲೆ ದುರಂತ.” ಎಂದು ಟ್ವಿಟರ್‌ನಲ್ಲಿ ಆಘಾತ ವ್ಯಕ್ತೊಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!