Monday, November 28, 2022

Latest Posts

ಪ್ರವಾಸಕ್ಕೆ ಪ್ಲಾನ್‌ ಮಾಡುತ್ತಿದ್ದೀರಾ? ಇಲ್ಲಿವೆ ನೋಡಿ ದಕ್ಷಿಣ ಭಾರತದ ಅತ್ಯುತ್ತಮ ಪ್ರವಾಸಿ ತಾಣಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತದ ದಕ್ಷಿಣ ರಾಜ್ಯಗಳು ತಮ್ಮ ರಮಣೀಯ ಭೂದೃಶ್ಯಗಳು ಮತ್ತು ಹೇರಳವಾದ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಸೋಂಪಾಗಿ ಬೆಳೆದುನಿಂತ ಮರಗಳು, ಪ್ರಾಚೀನ ಕಡಲತೀರಗಳು, ಸಮೃದ್ಧವಾದ ಪರ್ವತ ಶ್ರೇಣಿಗಳು ದಕ್ಷಿಣದ ಪ್ರಶಾಂತ ಭೂದೃಶ್ಯಗಳಿಗೆ ಸರಿಸಾಟಿ ಬೇರಾವುದೂ ಇಲ್ಲ. ಇಲ್ಲಿ ಹರಿಯುವ ನದಿಗಳು, ಸರೋವರಗಳು ಮತ್ತು ಜಲಮೂಲಗಳು ಪ್ರಾಕೃತಿಕ ಸೌಂದರ್ಯವನ್ನು ಮೈವೆತ್ತು ಹರಿಯುತ್ತವೆ. ಆದ್ದರಿಂದ ದಕ್ಷಿಣ ರಾಜ್ಯಗಳ ನೈಸರ್ಗಿಕ ಸೌಂದರ್ಯ ಪ್ರವಾಸಿ ಪ್ರಿಯರಿಗೆ ಅಚ್ಚುಮೆಚ್ಚಿನವಾಗಿವೆ.
ನಾವಿಲ್ಲಿ ದಕ್ಷಿಣದ ಸುಂದರವಾದ ಸರೋವರಗಳು ಮತ್ತು ಹಿನ್ನೀರುಗಳ ಪ್ರದೇಶಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ಇದು ದಕ್ಷಿಣ ಭಾರತದ ನಿಮ್ಮ ಮುಂದಿನ ಪ್ರವಾಸದಲ್ಲಿ ಆನಂದ ನೀಡುವ ಅತ್ಯುತ್ತಮ ತಾಣಗಳು ಇಲ್ಲಿವೆ ನೋಡಿ..

1. ಅಲೆಪ್ಪಿ (ಕೇರಳ)


ಕೇರಳದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಅಲೆಪ್ಪಿಯನ್ನು ‘ಪೂರ್ವದ ವೆನಿಸ್’ ಎಂದು ಕರೆಯಲಾಗುತ್ತದೆ. ಇದು ಪ್ರಸಿದ್ಧ ಹಿನ್ನೀರು ಪ್ರದೇಶವನ್ನು ಹೊಂದಿದೆ. ಹಚ್ಚ ಹಸಿರಿನ ಹೊಲಗಳು, ಎತ್ತರದ ತೆಂಗಿನ ಮರಗಳು ಮತ್ತು ಸೊಗಸಾದ ಹಿನ್ನೀರುರು ಪ್ರದೇಶದ ವಿಸ್ಮಯಕಾರಿ ನೋಟ ಮತ್ತು ರಮಣೀಯ ದೃಶ್ಯಾವಳಿಗಳಿವೆ. ಹೊಸದಾಗಿ ವಿವಾಹವಾದ ದಂಪತಿಗಳು ಮಧುಚಂದ್ರಕ್ಕೆ ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ನೀವು ಕೇರಳದಲ್ಲಿ ವಿಹಾರಕ್ಕೆ ಯೋಜಿಸುತ್ತಿದ್ದರೆ ಅಲೆಪ್ಪಿಗೆ ವಿಹಾರದ ಬಗ್ಗೆ ಆಲೋಚಿಸಿ.

2. ಪಿಚಾವರಂ (ಚೆನ್ನೈ)


ಚೆನ್ನೈನಿಂದ 200 ಕಿಲೋಮೀಟರ್ ದೂರದಲ್ಲಿ ಚಿದಂಬರಂ ಕರಾವಳಿ ಗ್ರಾಮವಿದೆ. ಈ ಕರಾವಳಿ ಪಟ್ಟಣವು ಸೊಂಪಾದ ಹಸಿರು ಮತ್ತು ಪ್ರಶಾಂತ ಜಲಮೂಲಗಳಿಂದ ಸುತ್ತುವರೆದಿದೆ. ಇದು ಸುಂದರವಾದ ಸರೋವರವನ್ನು ಒಳಗೊಂಡಿದೆ. ಸರೋವರವು ಅಭಯಾರಣ್ಯದಿಂದ ಸುತ್ತುವರೆದಿದೆ. ಇದು ಅದರ ವೈಭವ ಮತ್ತು ಸೌಂದರ್ಯವನ್ನು ದೈವಿಕಸಾದೃಶವಾಗಿಸಿದೆ.

3. ಕುಮಾರಕೋಮ್ (ಕೇರಳ)


ವೆಂಬನಾಡ್ ಸರೋವರದಲ್ಲಿರುವ ಸುಂದರವಾದ ದ್ವೀಪಗಳ ಒಂದು ಸಣ್ಣ ಸಮೂಹವೆಂದರೆ ಕುಮಾರಕೋಮ್. ಈ ಸರೋವರವು ಹೌಸ್‌ಬೋಟ್ ಸವಾರಿಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರದೇಶದ ಆಹ್ಲಾದಕರ ಸವಾರಿಯನ್ನು ನೀಡುತ್ತದೆ. ವೆಂಬನಾಡಿನ ಹಿನ್ನೀರಿನಲ್ಲಿ ದೋಣಿ ವಿಹಾರವಿದೆ. ಇದು ಯಾವುದೇ ಪ್ರಯಾಣಿಕರು ಪ್ರಯತ್ನಿಸಲೇಬೇಕಾದ ಅನುಭವವಾಗಿದೆ.

4. ಜೋಗ್ ಫಾಲ್ಸ್ (ಕರ್ನಾಟಕ)

ದೇಶದ ಎರಡನೇ ಅತಿ ಎತ್ತರದ ಜಲಪಾತ ಜೋಗ್ ಜಲಪಾತವು ಕರ್ನಾಟಕದ ಭವ್ಯವಾದ ಪ್ರವಾಸಿ ಆಕರ್ಷಣೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಈ ಜಲಪಾತಕ್ಕೆ ದೇಶವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಎತ್ತರದಿಂದ ಧುಮುಕುವ ಜಲಪಾತವು ನಿಮಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.

5. ವಲಿಯಪರಂಬ ಹಿನ್ನೀರು ಪ್ರದೇಶ (ಕೇರಳ)

ವಿಸ್ತಾರವಾದ ಮಲಬಾರ್ ಕರಾವಳಿ ಪ್ರದೇಶದಿಂದ ಆವೃತ್ತವಾಗಿರುವ ಕೇರಳದ ಬೇಕಲ್ ಪ್ರದೇಶದಲ್ಲಿ ವಲಿಯಪರಂಬ ಹಿನ್ನೀರು ಎಂಬ ಹೆಸರಿನ ರಮಣೀಯ ತಾಣವಿದೆ. ಕಡಲತೀರಗಳು ಮತ್ತು ಕೋಟೆಗಳು, ಪ್ರಖ್ಯಾತ ಪ್ರವಾಸಿ ತಾಣಗಳಿಂದ ಸುತ್ತುವರೆದಿರುವ ಈ ತಾಣವು ಪ್ರವಾಸಿಗರಿಗೆ ಮರೆಯಲಾಗದ ಅದ್ಭುತ ಅನುಭವಗಳನ್ನು ನೀಡುತ್ತದೆ.

6. ಪೈಕಾರ ಸರೋವರ (ತಮಿಳುನಾಡು)

ಪೈಕಾರಾ ಅಣೆಕಟ್ಟನ್ನು ದಟ್ಟವಾದ ಕಾಡಿನ ನಡುವೆ ನಿರ್ಮಿಸಲಾಗಿದೆ. ಮತ್ತು ಇದು ತಮಿಳುನಾಡಿನ ಊಟಿ ಪ್ರದೇಶದಲ್ಲಿ ಕಣ್ಣು ಹಾಯಿಸಿದಷ್ಟೂ ಹಚ್ಚಹಿರಿನ ದೃಶ್ಯಾವಳಿಗಳನ್ನು ಹೊಂದಿರುವ ಸುಂದರ ತಾಣವಾಗಿದೆ. ಈ ಸರೋವರವು ನಿಸರ್ಗದ ಸಾಮಿಪ್ಯದಲ್ಲಿ ಮುಳುಗಿಹೋಗಬಯಸುವವರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಊಟಿಯಿಂದ ದಿನದ ಪ್ರವಾಸಕ್ಕೆ ಇದು ಪರಿಪೂರ್ಣ ತಾಣವಾಗಿದೆ.

ಪಚ್ಚೆ ಸರೋವರ (ತಮಿಳುನಾಡು)

ಊಟಿಯಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ ಎಮರಾಲ್ಡ್ ಸರೋವರವು ಸುತ್ತಲೂ ನೀಲಿ ನೀರು ಮತ್ತು ಶಾಂತವಾದ ಪರಿಸರವನ್ನು ಹೊಂದಿದೆ. ಇದು ದಟ್ಟವಾದ ಕಾಡುಗಳ ನಡುವೆ ನೆಲೆಯಾಗಿದ್ದು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ನೀಲಗಿರಿಯ ಪ್ರವ್ತ ಶ್ರೇಣಿಯಲ್ಲಿ ಪ್ರಕೃತಿಯನ್ನು ಆನಂದಿಸಲು ಇದು ಉತ್ತಮ ಸ್ಥಳವಾಗಿದೆ.
ನೀವು ದಕ್ಷಿಣ ಭಾರತದಲ್ಲಿ ನಿಮ್ಮ ಮುಂದಿನ ರಜಾದಿನಗಳಿಗೆ ಹೋದಾಗ ಈ ಪ್ರಶಾಂತ ಸರೋವರಗಳಿಗೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!