ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆ.17ಕ್ಕೆ 70ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ವೇಳೆ ಬಿಜೆಪಿಯಿಂದ ವಿಶೇಷ ‘ಸೇವಾ ಸಪ್ತಾಹ’ ಆಚರಿಸಲು ತೀರ್ಮಾನಿಸಲಾಗಿದೆ.
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸೆ.14ರಿಂದ ಸೆ,20ರವರೆಗು ಸೇವಾ ಸಪ್ತಾಹ ನಡೆಯಲಿದ್ದು, ದೇಶಾದ್ಯಂತ ವಿವಿಧ ಸೇವಾ ಚಟುವಟಿಗಳನ್ನು ಆಯೋಜಿಸಲಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಘಟಗಕ್ಕೆ ಮಾಹಿತಿ ಕಳುಹಿಸಲಾಗಿದ್ದು, ರಾಜ್ಯಗಳಲ್ಲಿ ಮಾಡಬಹುದಾದ ಸೇವಾ ಚಟುವಟಿಗಳ ಕುರಿತು ತಿಳಿಸಲಾಗಿದೆ.
70 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ‘Seventy’ ಎಂಬ ವಿಶೇಷ ಥೀಮ್ ಅನ್ನು ಕೇಂದ್ರ ಬಿಜೆಪಿ ಕಾರ್ಯದರ್ಶಿ ಅರುಣ್ ಜೇಟ್ಲಿ ರಾಜ್ಯಗಳಿಗೆ ತಿಳಿಸಿದೆ.
ಪ್ರಧಾನಿ ಮೋದಿ ಸೆ.17 1950ರಂದು ಗುಜರಾತ್ ನ ವಡಾನಗರದಲ್ಲಿ ಜನಿಸಿದರು.