1857 ರ ಕ್ರಾಂತಿಯಲ್ಲಿ ಹೋರಾಡುತ್ತಿದ್ದ ಗಂಜನ್ ಸಿಂಗ್ ಜೊತೆಗೆ 70 ಕ್ರಾಂತಿಕಾರಿಗಳನ್ನು ಮರವೊಂದಕ್ಕೆ ಗಲ್ಲಿಗೇರಿಸಲಾಗಿತ್ತು 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬ್ರಿಟಿಷರ ವಿರುದ್ಧ ವೀರತನದಿಂದ ಹೋರಾಡಿ ದೇಶಕ್ಕಾಗಿ ಪ್ರಾಣರ್ಪಣೆ ಮಾಡಿದ ಧೀರರಲ್ಲಿ ಮಧ್ಯಪ್ರದೇಶದ ದೇಲ್‌ಖಂಡದ ಗಂಜನ್ ಸಿಂಗ್ ಗೊಂಡ್ ಅವರು ಒಬ್ಬರು. ಅವರು 1822 ರ ಏಪ್ರಿಲ್ 14, ಸಿಂಗ್ಪುರ್ ಗ್ರಾಮದಲ್ಲಿ ಜನಿಸಿದರು.
ಮಧ್ಯಪ್ರದೇಶ ಸಾಗರ್‌ ಜಿಲ್ಲೆಯ ಸಿಂಗ್ಪುರ್ ಗ್ರಾಮವು ಬುಡಕಟ್ಟು ಪ್ರಾಬಲ್ಯದ ಪ್ರದೇಶವಾಗಿತ್ತು. ಈ ಬುಡಕಟ್ಟು ಸಮುದಾಯಕ್ಕೆ ಬ್ರಿಟೀಷರು ವಿನಾಕಾರಣ ನಾನಾ ತೊಂದರೆಗಳನ್ನು ನೀಡಿದರು. ಆಗ ಬ್ರಿಟೀಷರ ವಿರುದ್ಧ ತಿರುಗಿ ಬಿದ್ದ ಸಮುದಾಯ ನೀರು, ಕಾಡು ಮತ್ತು ಭೂಮಿಗಾಗಿ ಬ್ರಿಟೀಷರ ವಿರುದ್ಧ ತೀವ್ರ ಕಾದಾಟ ನಡೆಸಿದರು.
ಈ ಸಮುದಾಯದ ನಾಯಕ ಗಂಜನ್ ಸಿಂಗ್ 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೊಂಡ ವೀರ ಯೋಧರನ್ನು ತೊಡಗಿಸಿದರು. 1857ರಲ್ಲಿ ಬ್ರಿಟೀಷರು ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ಕುಟಿಲ ನೀತಿಯನ್ನೊಡ್ಡಿ ಭಾರತದ ಸಾಮ್ರಾಜ್ಯದ ಕಿತ್ತುಕೊಳ್ಳುವ ನೀತಿಯ ವಿರುದ್ಧ ದೇಶದಲ್ಲಿ ಹಬ್ಬಿದ ಬೆಂಕಿ ಬುಂದೇಲ್‌ಖಂಡಕ್ಕೂ ತಟ್ಟಿತ್ತು. ಗಂಜನ್ ಸಿಂಗ್ ಗೊಂಡ್ ಆರಂಭದಲ್ಲಿ ಕ್ರಾಂತಿಗೆ ಪರೋಕ್ಷವಾಗಿ ಕ್ರಾಂತಿಯ ಮಿತ್ರರಾಗಿದ್ದರು. ಕ್ರಾಂತಿಕಾರಿಗಳಿಗೆ ಶ್ರಸ್ತಾಸ್ತ್ರಗಳು, ಕತ್ತಿಗಳು ಇತ್ಯಾದಿಗಳನ್ನು ಸ್ಥಳೀಯ ಕಮ್ಮಾರರಿಂದ ಒದಗಿಸಿಕೊಟ್ಟಿದ್ದಲ್ಲದೆ,
ಕ್ರಾಂತಿಕಾರಿಗಳಿಗೆ ಆಹಾರದ ವ್ಯವಸ್ಥೆಯಾವುವಂತೆ ನೋಡಿಕೊಳ್ಳುತ್ತಿದ್ದರು. ಈ ಕ್ರಾಂತಿಕಾರಿ ಚಟುವಟಿಕೆಗಳ ಪರಿಣಾಮವಾಗಿ ಗಂಜನ್ ಸಿಂಗ್ ಜಿ ಬ್ರಿಟಿಷ್ ಸಾಮ್ರಾಜ್ಯದ ಕಣ್ಣಿಗೆ ಬಿದ್ದರು.
ಆಗ ಮುಖ್ಯ ನಾಯಕರ ಸಂಪರ್ಕಕ್ಕೆ ಬಂದ ಅವರು ಕ್ರಾಂತಿಯ ಮುಖ್ಯವಾಹಿನಿಗೆ ಬಂದರು. ಕ್ರಾಂತಿಯನ್ನು ಬ್ರಿಟಿಷ್ ಸಾಮ್ರಾಜ್ಯವು ಮಿಲಿಟರಿ ಕ್ರಮದಿಂದ ಹತ್ತಿಕ್ಕಿದಾಗ, ನಂತರ ಗಂಜನ್ ಸಿಂಗ್ ಗೊಂಡ್ ಮತ್ತು ಇತರ 70 ಕ್ರಾಂತಿಕಾರಿಗಳನ್ನು ತಿಟರ್ಪಾನಿ ​​ಗ್ರಾಮದ ಅರಣ್ಯ ವಿಶ್ರಾಂತಿ ಗೃಹ ಸಂಕೀರ್ಣದಲ್ಲಿದ್ದ ಅರಳಿ ಮರಕ್ಕೆ ನೇತುಹಾಕಿ ಗಲ್ಲಿಗೇರಿಸಲಾಯಿತು. ಮತ್ತು ಗಂಜನ್ ಸಿಂಗ್ ಗೊಂಡ್ ಮತ್ತು ಅವರ ಸಹಚರರನ್ನು ದಿಯೋರಿ ಜಿಲ್ಲೆಯಲ್ಲಿ ಗಲ್ಲಿಗೇರಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!