Friday, August 19, 2022

Latest Posts

ಪಿರಿಯಾಪಟ್ಟಣದ ಗ್ರಾಮದಲ್ಲಿ ಮೊಳಗಿದ ಗುಂಡಿನ ಸದ್ದು: ಭಯಭೀತರಾದ ಗ್ರಾಮಸ್ಥರು

ಹೊಸದಿಗಂತ ವರದಿ ಮೈಸೂರು:

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗ್ರಾಮವೊಂದರಲ್ಲಿ ಪಿಸ್ತೂಲ್ ನಿಂದ ಗುಂಡಿನ ಮೊರೆತ ಮೊಳಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬಿಲ್ಲಹಳ್ಳಿಯಲ್ಲಿ ಮನೆಯ ಗಲ್ಲಿ ವಿಚಾರವಾಗಿ ಗುರುಲಿಂಗಪ್ಪ ಮತ್ತು ಚನ್ನಬಸವಪ್ಪ ಕುಟುಂಬದ ನಡುವೆ ಗಲಾಟೆ ನಡೆದಿದೆ. ಈ ವಿವಾದದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ. ಚನ್ನಬಸವಪ್ಪ ಅವರ ಮೊಮ್ಮಗಳ ಗಂಡ ಸುನೀಲ್ ಕುಮಾರ್ ಎಂಬಾತ ಬೆಂಗಳೂರಿನಿಂದ ರೌಡಿಗಳನ್ನು ಕರೆ ತಂದಿದ್ದನು. ಇವರಲ್ಲಿ ಮಧುಗೌಡ ಅಂಡ್ ಟೀಂ ಗುರುಲಿಂಗಪ್ಪನ ಕುಟುಂಬ ಜೊತೆ ಜಗಳಕ್ಕಿಳಿದಿದೆ. ಈ ಸಂದರ್ಭದಲ್ಲಿ ಜಗಳವಾಗಿ ಮಧುಗೌಡ ಮತ್ತು ಸಹಚರರು ಗುಂಡು ಹಾರಿಸಿದ್ದಾರೆ.

ಗುಂಡಿನ ಮೊರೆತದ ಶಬ್ಧ ಕೇಳಿ ಸಹಜವಾಗಿಯೇ ಗುರುಲಿಂಗಪ್ಪನ ಕುಟುಂಬ ಸೇರಿದಂತೆ ಗ್ರಾಮಸ್ಥರು ಭಯಗೊಂಡಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಪಿರಿಯಾಪಟ್ಟಣ ಪೊಲೀಸರು ಸುನೀಲ್ ಕುಮಾರ್, ಮಧುಗೌಡ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಜೆೋೂತೆಗೆ 11 ಸಜೀವ ಗುಂಡು, 2 ಖಾಲಿ ಗುಂಡು, ಪಾರ್ಚೂನರ್ ಕಾರು ಮತ್ತು ಮಹೇಂದ್ರ ಸ್ಕಾರ್ಪಿಯೊ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಾರಿ ಆಗಿರುವ ಗನ್ ಮೆನ್ ಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!