Monday, August 8, 2022

Latest Posts

73ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ: ಸಚಿವ ಬಿ.ಸಿ.ಪಾಟೀಲ್ ಅವರಿಂದ ಧ್ವಜಾರೋಹಣ

ಕೊಪ್ಪಳ:೭೩ ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ನೆರವೇರಿಸಿದರು.

ಸಚಿವ ಬಿ.ಸಿ.ಪಾಟೀಲ್ ಅವರು ಪೊಲೀಸ್, ಗೃಹ ರಕ್ಷಕ ದಳ, ಎನ್ ಸಿಸಿ, ಭಾರತ ಸ್ಕೌಟ್ಸ್ ಗೈಡ್ಸ್ ಮೂಲಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ದೇಶಕ್ಕೆ ೧೯೪೭ರಲ್ಲಿ ಸ್ವಾತಂತ್ರ ಸಿಕ್ಕರೆ ಹೈದ್ರಾಬಾಧ್ ಕರ್ನಾಟಕದ ೬ ಜಿಲ್ಲೆಯಲ್ಲಿ ನಿಜಾಮನ ಆಡಳಿತದಲ್ಲಿದ್ದ ಕಾರಣ ಒಂದು ವರ್ಷ ತಡವಾಗಿ ಅಂದರೆ ೧೯೪೮ ಸೆ.೧೭ ರಂದು ಸ್ವಾತಂತ್ರ್ಯ ಪಡೆಯಿತು. ಈಗಾಗಿ ೬ ಜಿಲ್ಲೆಗಳು ಎರಡು ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ.

ಆದರೆ ಕಲ್ಯಾಣ ಕರ್ನಾಟಕ ಹೋರಾಟಕ್ಕಾಗಿ ಈ ಭಾಗದ ಅನೇಕರು ಹೋರಾಟ ನಡೆಸಿದ್ದಾರೆ. ಅವರ ತ್ಯಾಗ ಬಲಿದಾನವನ್ನು ನಾವು ಯಾವತ್ತು ಸ್ಮರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿ.ಪಂ ಅದ್ಯಕ್ಷ ಹೆಚ್.ವಿಶ್ವನಾಥರಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಹಳ್ಳಿ, ತಾ.ಪಂ ಅದ್ಯಕ್ಷ ಬಾಲಚಂದ್ರನ್ ಜಿಲ್ಲಾಧಿಕಾರಿ ಎಸದ.ವಿಕಾಸ್ ಸುರಳ್ಕರ್, ಜಿಲ್ಲಾ ಎಸ್ಪಿ ಜಿ.ಸಂಗೀತಾ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿ.ಪಂ.ಸಿಇಓ ರಘುನಂದನಮೂರ್ತಿ, ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss