Wednesday, August 17, 2022

Latest Posts

ಕೋಲಾರದಲ್ಲಿ ಇಂದು 755 ಮಂದಿಗೆ ಪಾಸಿಟಿವ್, 765 ಜನರು ಗುಣಮುಖ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ, ಕೋಲಾರ:

ಕೋಲಾರ ಜಿಲ್ಲೆಯಲ್ಲಿ ಸೋಮವಾರವೂ ಕೋವಿಡ್ ಮಾರಿ ಅಟ್ಟಹಾಸ ಮುಂದುವರೆದಿದ್ದು, ಇಂದು 755  ಮಂದಿಗೆ ಸೋಂಕು ಕಂಡು ಬಂದಿದೆ. ಇಂದು 8 ಮಂದಿ ಸಾವನ್ನಪ್ಪಿದ್ದಾರೆ.
ಈವರೆಗೂ ಒಟ್ಟು ಸಾವನ್ನಪ್ಪಿದವರ ಸಂಖ್ಯೆ 263 ಕ್ಕೆ ಏರಿದೆ. ಈವರೆಗೂ ಒಟ್ಟು ಪ್ರಕರಣಗಳ ಸಂಖ್ಯೆ 25484 ಕ್ಕೆ ಏರಿದೆ. ಇಂದು ಗುಣಮುಖರಾಗಿ ಬಿಡುಗಡೆಯಾಗಿರುವ 765 ಮಂದಿ ಸೇರಿದಂತೆ  ಈವರೆಗೂ ಒಟ್ಟು 20850 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4904 ಆಗಿದ್ದು,  ಐಸಿಯುನಲ್ಲಿ 29 ಮಂದಿ ಇದ್ದಾರೆ.
ಈವರೆಗೂ ಜಿಲ್ಲೆಯಲ್ಲಿ 498123 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 472639 ಮಾದರಿಗಳು ನೆಗಟೀವ್ ಎಂದು ವರದಿಯಾಗಿದೆ. 1483 ಮಂದಿಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!