Tuesday, August 16, 2022

Latest Posts

ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿ ಎದ್ದು ಕುಳಿತಳು ಕೊರೋನಾ ಸೋಂಕಿತ ಮಹಿಳೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲೇ ಮಹಿಳೆಯೊಬ್ಬಳು ಎದ್ದು ಕುಳಿತಿರುವ ಅಚ್ಚರಿಯ ಘಟನೆ ಇಂದು ಮಹಾರಾಷ್ಟ್ರದ ಬಾರಾಮತಿಯ ಮುಧಾಳೆ ಗ್ರಾಮದಲ್ಲಿ ನಡೆದಿದೆ.

ಮಹಿಳೆಯನ್ನು 76 ವರ್ಷದ ಶಕುಂತಲ ಗಾಯ್ಕ್​ವಾಡ್ ಎಂದು ಗುರುತಿಸಲಾಗಿದೆ. ಕೆಲವು ದಿನದ ಹಿಂದೆ ಈ ಮಹಿಳೆಗೆ ಕೊರೋನಾ ದೃಢಪಟ್ಟಿತ್ತು. ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಳು. ಆದರೆ ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುತ್ತಿದ್ದರಿಂದ ಆಕೆಯನ್ನು ಕುಟುಂಬಸ್ಥರು ಮೇ.10 ರಂದು ಬಾರಾಮತಿಯಲ್ಲಿ ಆಸ್ಪತ್ರೆಯೊಂದಕ್ಕೆ ದಾಖಲಿಸಲು ನಿರ್ಧರಿಸಿದರು.

ಆದರೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ, ಕಾರಿನಲ್ಲಿಯೇ ಆಕೆಯನ್ನು ಇರಿಸಲಾಗಿತ್ತು. ಈ ಮಧ್ಯೆ ಆಕೆ ಕಾರಿನಲ್ಲಿಯೇ ಪ್ರಜ್ಞೆಯನ್ನು ಕಳೆದುಕೊಂಡಿದ್ದಳು. ಕುಟುಂದವರು ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿ ಅಂತಿಮ ಕ್ರಿಯೆಗೆ ಸಿದ್ಧತೆ ಮಾಡಿಕೊಂಡರು.

ಇನ್ನೇನು ಅಂತ್ಯಕ್ರಿಯೇ ನಡೆಯಬೇಕು ಎನ್ನುವಷ್ಟರಲ್ಲಿ ಆಕೆ ಎದ್ದು ಅಳುತ್ತಾ, ತನ್ನೆರಡು ಕಣ್ಣುಗಳನ್ನು ತೆರೆದು ಕುಳಿತಳು. ಶಾಕ್ ಆದ ಕುಟುಂಬಸ್ಥರು ತಕ್ಷಣ ಆಕೆಯನ್ನು ಬಾರಾಮತಿಯ ಸಿಲ್ವರ್​ ಜುಬಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!