ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಇಂದಿಗೆ 77ವರ್ಷ, ಆಗಸ್ಟ್ 15, 1947ರಂದು ಬ್ರಿಟೀಷರು ಭಾರತ ಬಿಟ್ಟು ತೊಲಗಿ ಭಾರತೀಯರಿಗೆ ಸ್ವತಂತ್ರ್ಯ ನೀಡಿದ ದಿನ. ಈ ದಿನಕ್ಕಾಗಿ ಅದೆಷ್ಟೋ ತ್ಯಾಗ, ಬಲಿದಾನಗಳು ನಡೆದಿವೆ. ಅದೆಲ್ಲದರ ಸಂಕೇತವೇ ಸ್ವಾತಂತ್ರ್ಯ.
ಇಂದು ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ದೆಹಲಿಯ ಕೆಂಪು ಕೋಟೆಯಿಂದ ಹಿಡಿದು ಒಂದು ಮೂಲೆಯಲ್ಲಿರುವ ಗ್ರಾಮದಲ್ಲೂ ಕೂಡ ಇವತ್ತು ರಾಷ್ಟ್ರ ಧ್ವಜ ಹಾರಾಡಲಿದೆ. ಬೆಳಗ್ಗೆ 7.30ಕ್ಕೆ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಣಿಕ್ ಷಾ ಪೆರೇಡ್ ಗ್ರೌಂಡ್‌ನಲ್ಲಿ ಧ್ವಜಾರೋಹಣ ಮಾಡುವರು.
ಇಂದು ದೇಶದ ಎಲ್ಲಾ ಸರ್ಕಾರಿ ಕಚೇರಿಗಳು, ಆಟೋ, ಕಾರು, ಬಸ್ ಹಾಗೆ ಶಾಲಾ-ಕಾಲೇಜುಗಳ ಮುಂದೆಯೂ ತ್ರಿವರ್ಣ ಹಾರಾಡಲಿದೆ.