ಅಮೆರಿಕ: ಕೊರೋನಾ ವೈರಸ್ ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿದ್ದು, ಇದರ ತಡೆಗಟ್ಟುವಿಕೆಗಾಗಿ ರೂಪಿಸಲಾದ 8.3 ದಶಲಕ್ಷ ಅಮೆರಿಕನ್ ಡಾಲರ್ ಯೋಜನೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಅಮೆರಿಕ ಸದನದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಇದರ ಮೂಲಕ ಲಸಿಖೆಗಳ, ವಿವಿಧ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯ ವೆಚ್ಚ ಭರಿಸುವುದಕ್ಕಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಆರ್ಥಿಕ ಸಹಾಯ ಮಾಡಲು ನಿರ್ಧರಿಸಲಾಗಿದೆ.
ವಿನಿಯೋಗ ಸಮಿತಿಯ ಅಧ್ಯಕ್ಷ ರಿಚಾರ್ಡ್ ಶೆಲ್ಬೈ ಈ ಕುರಿತು ತಿಳಿಸಿದ್ದು, ಸದನದಲ್ಲಿ ಈ ಯೋಜನೆಗೆ ಅನುಷ್ಠಾನಕ್ಕೆ ಪೂರ್ಣ ಬಹುಮತವಿದ್ದು, ಟ್ರಂಪ್ ಒಪ್ಪಿಗೆಯಷ್ಟೇ ಬಾಕಿ ಇದೆ ಎಂದು ಹೇಳಿದ್ದಾರೆ.